ಹಲ್ಯಾಳ : ಗ್ರಾಮದ ಬಸವೇಶ್ವರ ಶಾಲೆಯಲ್ಲಿ ಬುದುವಾರ ಸ್ನೇಹ ಸಮ್ಮೇಳನ ಜರುಗಿತು. ಗಣ್ಯರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಡಿ ವಾಯ್ ಎಸ್ ಪಿ ಪ್ರಶಾಂತ್ ಮುನ್ನೊಳಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ ಬದುಕಿನಲ್ಲಿ ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಆಳವಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಾನೂನನ್ನು ಗೌರವಿಸಬೇಕು ಹಾಗೂ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಜವಾಬ್ದಾರಿಯುತ ಪಾತ್ರ ವಹಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಪಾವನ ಸಾನಿದ್ಯ ವಹಿಸಿದ ಕಾಯಕಯೋಗಿ ಶ್ರೀ ಶಶಿಕಾಂತ್ ಗುರೂಜಿ ಮಾತನಾಡಿ, ‘ಕಠಿಣ ಪರಿಶ್ರಮ ಮತ್ತು ಮೌಲ್ಯಾಧಾರಿತ ಜೀವನವೇ ಯಶಸ್ಸಿನ ಗುಟ್ಟು, ಈ ಯಶಸ್ಸು ಸಿಗಬೇಕಾದರೇ ನಾವು ಸಂಸ್ಕಾರ ವಂತರಾಗಬೇಕು ಎಂದರು.
ತಾಲೂಕಾ ವೈದ್ಯಧಿಕಾರಿ ಬಸಗೌಡ ಕಾಗೆ ಮಕ್ಕಳು ಮೊಬೈಲ ಬಳಕೆಯನ್ನು ನಿಯಂತ್ರಣ ಮಾಡಿ ಎಳೆವಯಸ್ಸಿನಲ್ಲಿ ಕಣ್ಣಿನ ದೋಷ ಬಂದಿತು, ಮತ್ತು ಅಂಗಡಿಯಲ್ಲಿನ ದಿನಸೇಗಳನ್ನ ತಿನ್ನೋದನ್ನ ಕಡಿಮೆ ಮಾಡಿ ಅಮ್ಮಾ ಮಾಡಿರುವ ಊಟ ಮಾಡಿ ಆರೋಗ್ಯ ಸರಿಯಾಗಿ ಇಟ್ಟುಕ್ಕೊಳ್ಳಿ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಪ್ರೊ. ಸುರೇಶ ತಕ್ಕತ್ತರಾವ ಅವರು ಮಕ್ಕಳು ಎ ಐ ತಂತ್ರಜ್ಞಾನ ದಂತೆ ಮುಂದೆ ನುಗ್ಗುತ್ತಿದ್ದಾರೆ ಆದರೆ ಅವರು ಮಾಡುವ ಕಾರ್ಯ ಯಾವದಕ್ಕೂ ಭಾವನೆಗಳೇ ಇಲ್ಲ ನಾವು ನೈತಿಕತೆ ಯನ್ನು ಬೆಳೆಸಿಕ್ಕೊಲ್ಲಬೇಕು ಎಂದರು.

ಇನ್ನೊರ್ವ್ ಉಪನ್ಯಾಸಕರು ಆದ ಶ್ರೀಮತಿ ರೇಣುಕಾ ಬಡಕಂಬಿ ಅವರು ಈ ಶಾಲೆಯ ಅಧ್ಯಕ್ಷರಾದ ಶ್ರೀ ಆರ್ ಎಂ ಪಾಟೀಲ ಗುರುಗಳು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ,” ಎಂದರು.
ಅಧ್ಯಕ್ಷತೆ ವಹಿಸಿದ ಆರ್ ಎಂ ಪಾಟೀಲರು ವಿದ್ಯಾರ್ಥಿಗಳು ಮುಂದಿನ ಭವಿಷ್ಯಕ್ಕೆ ಉತ್ತಮ ವ್ಯಕ್ತಿಯನ್ನಾಗಿ ಮಾಡುವ ಜವಾಬ್ದಾರಿ ನಮ್ಮದು ಎಂದು ಉಪಯುಕ್ತ ಮಾರ್ಗದರ್ಶನ ನೀಡಿದರು.
ಹಲ್ಯಾಳ ಗ್ರಾಮದ ವಿರಕ್ತಮಠದ ಪೀಠಾಧಿಪತಿಗಳಾದ ಅಭಿನವ ಗುರುಸಿದ್ದ ಮಹಾಸ್ವಾಮಿಜಿಗಳು ಸಾನಿಧ್ಯಪರ ನುಡಿಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಎಂ ಎ ಹಿರೇಮಠ ನಿರೂಪಿಸಿದರು, ಎ ಬಿ ಬಿರಾದರ ಸ್ವಾಗತಿಸಿದರು, ಮುಖ್ಯ್ಯೊಪಾಧ್ಯಾಯರಾದ ಸಂತೋಷ್ ಹಡಕರ್ ವಂದಿಸಿದರು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾದೇವಿ ಕಾಂಬಳೆ, ಗ್ರಾ. ಪಂ ಉಪಾಧ್ಯಕ್ಷರು ಪ್ರಭಾವತಿ ಜಾಬಗೌಡರ್,ಡಿ ಡಿ ಮೇಕನಮರಡಿ, ಏನ್ ಎಸ್ ಉಗಾರೆ,ಸುರೇಶ್ ಚಿಕ್ಕಟ್ಟಿ,ಕುಮಾರ ಗೌಡ ಪಾಟೀಲ,ಮುರೆಪ್ಪ ಶೇಡಾಶಾಳ, ಚಿದಾನಂದ ಮುಖಣಿ ಮತ್ತು ಶಿಕ್ಷಕರು,ಊರಿನ ಸಮಸ್ತ ನಾಗರಿಕರು, ಪಾಲಕರಿದ್ದರು.




