ಧಾರವಾಡ: ಬೆಳಗಾವಿಯಲ್ಲಿ ಡಿಸೆಂಬರ್ 9 ರಿಂದ 20ರ ವರೆಗೆ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಅಧಿವೇಶನದಲ್ಲಿ ಅನೇಕ ಬಿಲ್ ಗಳು ಮಂಡನೆಯಾಗಲಿವೆ.ಅನೇಕ ವಿಷಯಗಳ ಕುರಿತಾಗಿ ಚರ್ಚೆ ನಡೆಯಲಿದ್ದು, ಚಳಿಗಾಲದ ಅಧಿವೇಶನ ಈ ಬಾರಿ ರಂಗೇರಲಿದೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದ ಬಗ್ಗೆ ಎಲ್ಲಾ ಶಾಸಕರು ಕಾಳಜಿ ವಹಿಸಬೇಕೆಂಬುದು ನನ್ನ ಅನಿಸಿಕೆಯಾಗಿದ್ದು, ಅಧಿವೇಶನಕ್ಕೆ ಮೊದಲೇ ವಿರೋಧ ಪಕ್ಷದ ನಾಯಕರ ಸಭೆ ನಡೆಸಲಾಗುವುದು.
ಯಾವ ರೀತಿ ಅಧಿವೇಶನ ನಡೆಸಬೇಕೆಂದು ತೀರ್ಮಾನ ಮಾಡಲಾಗುವುದು. ಡಿಸೆಂಬರ್ 2ರಂದು ಸಭೆ ನಡೆಯಲಿದ್ದು, ಅತ್ಯಂತ ಸರಳವಾಗಿ ಅಧಿವೇಶನ ನಡೆಸಿ ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.