ಬಾಗೇಪಲ್ಲಿ : ಪಟ್ಟಣದ ದಿವಂಗತ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿರವರ ಅಭಿಮಾನಿಗಳಿಂದ ಅವರ ಸವಿನೆನಪಿಗಾಗಿ ಗೂಳೂರು ವೃತ್ತದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ಪಟ್ಟಣದ ಗುಳೂರು ವೃತ್ತದಲ್ಲಿ ದಿವಂಗತ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ರವರ ಭಾವಚಿತ್ರಕ್ಕೆ ಗುಲಾಬಿ ಹೂವಿನ ಹಾರ ಹಾಕಿ ಗೌರವಿಸಿ, ದಿನಪೂರ್ತಿ ನೂರಾರು ಜನರಿಗೆ ಮಜ್ಜಿಗೆ ವಿತರಣೆ ಮಾಡಲಾಯಿತು.
ಈ ವೇಳೆಯಲ್ಲಿ ಮುಖಂಡ ವೆಂಕಟೇಶಪ್ಪರವರು ಮಾತನಾಡಿ, ದಿವಂಗತ ಮಾಜಿ ಶಾಸಕರಾದ ಜಿ.ವಿ.ಶ್ರೀರಾಮರೆಡ್ಡಿರವರು ಎರಡು ಭಾರೀ ಶಾಸಕರಾಗಿದ್ದ ಸಮಯದಲ್ಲಿ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಹಲವಾರು ಅಭಿವೃದ್ಧಿ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದರು.ಅವರ ಅವಧಿಯಲ್ಲಿ ಆದ ಜನಪರ ಯೋಜನೆಗಳು ಜನರು ಈಗಲೂ ಸಹ ಮರೆಯಲು ಸಾಧ್ಯವಿಲ್ಲ. ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆ, ಬಸ್ ಡಿಪೋ, ಬಸ್ ನಿಲ್ದಾಣ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸರ್ಕಾರಿ ಆಸ್ಪತ್ರೆ, ಚಿತ್ರಾವತಿ ಡ್ಯಾಂ, ಬಡವರಿಗೆ ನಿವೇಶನಗಳನ್ನು ವಿತರಣೆ, ಹೀಗೆ ಹಲವಾರು ಯೋಜನೆಗಳ ಮುಖಾಂತರ ಬಾಗೇಪಲ್ಲಿ ತಾಲ್ಲೂಕು ಅಭಿವೃದ್ಧಿ ಮಾಡಿ, ಬಾಗೇಪಲ್ಲಿ ತಾಲ್ಲೂಕು ಜನನಾಯಕ ‘ಅಭಿವೃದ್ಧಿಯ ಸರದಾರ’ ‘ಅಭಿವೃದ್ಧಿ ಹರಿಕಾರಕ’ ಎನ್ನಿಸಿಕೊಂಡಿರುವ ದಿವಂಗತ ಜಿ.ವಿ. ಶ್ರೀರಾಮರೆಡ್ಡಿರವರ ಸವಿನೆನಪಿಗಾಗಿ ಪ್ರತಿವರ್ಷ ಅನ್ನದಾನ ಕಾರ್ಯಕ್ರಮಗಳನ್ನು ಕಳೆದ ಮೂರು ವರ್ಷಗಳಿಂದ ಮಾಡುತ್ತಿದ್ದು, ಈ ವರ್ಷ ದಿವಂಗತ ಜಿ.ವಿ.ಶ್ರೀರಾಮರೆಡ್ಡಿರವರ ಸವಿನೆನಪಿಗಾಗಿ ಸಾರ್ವಜನಿಕ ರಿಗೆ ತಂಪಾದ ಮಜ್ಜಿಗೆಯನ್ನು ನೀಡುತ್ತಿದ್ದೆವೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ರಷೀದ್, ಅಬುಬಕರ್, ರಮಣ, ರಾಮಾಂಜಿ, ಮುಂತಾದವರು ಹಾಜರಿದ್ದರು.
ವರದಿ: ಬಿ.ಎ.ಬಾಬಾಜಾನ್




