Ad imageAd image

ಇಂದಿನಿಂದ ಐಗಳಿ ಸಿಂಧೂರ ವಸತಿ ಅಪ್ಪಯ್ಯ ಸ್ವಾಮಿಗಳ ಜಾತ್ರೆ.

Bharath Vaibhav
ಇಂದಿನಿಂದ ಐಗಳಿ ಸಿಂಧೂರ ವಸತಿ ಅಪ್ಪಯ್ಯ ಸ್ವಾಮಿಗಳ ಜಾತ್ರೆ.
WhatsApp Group Join Now
Telegram Group Join Now

 ಐಗಳಿ : ಗ್ರಾಮದ ಸಿಂಧೂರ ವಸತಿ ಶ್ರೀ ಅಪ್ಪಯ್ಯ ಸ್ವಾಮಿಗಳ ಜಾತ್ರಾ ಮಹೋತ್ಸ ಜೂ. 28 ರಿಂದ ಜು. ೨ ವರಿಗೆ ವಿವಿಧ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮದೊಂದಿಗೆ ಜರುಗಲಿದೆ. 28 ರಂದು ಬೆಳಗ್ಗೆ ಹಂದರಂಗ ಮತ್ತು ಆಪ್ಪಯ್ಯಸ್ವಾನಿಗಳ ವಿಶೇಷ ಪೂಜೆ ಯೊಂದಿಗೆ ಜಾತ್ರೆ ಪ್ರಾರಂಭವಾಗಲಿದೆ. ಜು.1 ರಂದು ಮಂಗಳವಾರ ಬೆಳಗ್ಗೆ ಭಕ್ತರಿಂದ ರ್ದರ್ಘದಂಡ ನಮಸ್ಕಾರ ಶ್ರೀಗಳ ಗದ್ದುಗೆ ಕನ್ನಾಳದ ಬಸವಲಿಂದ ಸ್ವಾಮಿಗಳಿಂದ ರುದ್ರಾಭಿಷೇಕ ,ನಂತರ ಕೊಟ್ಟಲಗಿ ಸಿದ್ದಾರೂಡ ಭಜನಾ ಮಂಡಳಿ ಮತ್ತು ಕೂಕಟನೂರ ಯಲ್ಲಮ್ಮವಾಡಿ ಭಜನಾ ಮಂಡಳಿಗಳಿಂದ ಭಜನೆ ಪದಗಳು , ಮಹಾನೈವೇದ್ಯ ನಡೆಯಲಿದೆ. ವಿಜಯಪುರದ ಡಾ ಉಮಾಮಹೇಶ್ವರ ಸಿಂಧೂರ ಹಾಗೂ ಡಾ ಪಾರ್ವತಿ ಸಿಂಧೂರ ಅವರಿಂದ ಉಚಿತ ವೈದ್ಯಕೀಯ ಸೇವಾ ಶಿಬಿರದಲ್ಲಿ ರಕ್ತ .

ಬಿಪಿ ಮಧಿಮೇಹ ಸ್ತ್ರೀರೋಗ ಪರೀಕ್ಷೆ ಹಾಗೂ ಚಿಕಿತ್ಸೆ ಮಾಡಲಾಗುವುದು . ಜು. 2 ರಂದು ಶ್ರೀಗಳ ಗದ್ದುಗೆಗೆ ಅಭಿಷೇಕ, ಕರಡಿ ಮಜಲು ,ಸಂಬಾಳವಾದ ,ಡೊಳ್ಳು ಕುಣಿತ, ಸೇರಿದಂತೆ ವಿವಿದ ವಾದ್ಯ ಮೇಳಗಳು ನಡೆಯಲಿವೆ.

ಮಧ್ಯಾಹ್ನ ತುಬಚಿ ಹಾಗೂ ನಾಗನೂರ ರುದ್ರಾಕ್ಷಿ ಮಠದ ಪೀಠಾಧ್ಯಕ್ಷ ಡಾ. ಅಲ್ಲಮಪ್ರಭು ಸ್ವಾಮಿಗಳಿಂದ ಪ್ರವಚನ ಹಾಗೂ ಮಹಾ ಪ್ರಸಾದ , ೩ ಗಂಟೆಗೆ ಪಲ್ಲಕ್ಕಿ ಹಾಗೂ ರಥೋತ್ಸವ , ಅಂದು ರಾತ್ರಿ ಸಿಂಧೂರ ವಸತಿ ಗೆಳೆಯರ ಬಳಗದ ಆಶ್ರಯದಲ್ಲಿ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರೆಯ ಕಮಿಟಿ ಕಾರ್ಯದರ್ಶಿ ಮಲಗೌಡ ಪಾಟೀಲ ಅವರು ತಿಳಿಸಿದ್ದಾರೆ.

 ವರದಿ : ಆಕಾಶ ಮಾದರ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!