Ad imageAd image

ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಎಲ್ಲೆಡೆ ಅತ್ಯಾಚಾರ! ಅನಾಚಾರ! ಭ್ರಷ್ಟಾಚಾರ! : ಬಿಜೆಪಿ ಕಿಡಿ

Bharath Vaibhav
ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಎಲ್ಲೆಡೆ ಅತ್ಯಾಚಾರ! ಅನಾಚಾರ! ಭ್ರಷ್ಟಾಚಾರ! : ಬಿಜೆಪಿ ಕಿಡಿ
WhatsApp Group Join Now
Telegram Group Join Now

ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಅತ್ಯಾಚಾರ, ಕೊಲೆಸುಲಿಗೆ ಹೆಚ್ಚಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಎಲ್ಲೆಡೆ ಅತ್ಯಾಚಾರ! ಅನಾಚಾರ! ಭ್ರಷ್ಟಾಚಾರ!

ಕೊಲೆ! ಸುಲಿಗೆ! ಗ್ಯಾರಂಟಿಗಳು ಅವ್ಯಾಹತವಾಗಿ ನಡೆಯುತ್ತಿವೆ. ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ಸೃಷ್ಟಿಯಾಗಿರುವ ಪರಿಣಾಮ ಕೊಡಗಿನಲ್ಲಿ ಬಾಲಕಿ ಮೇಲೆ ಐವರು ಕಾಮುಕರಿಂದ ಅತ್ಯಾಚಾರ ನಡೆದಿದೆ. ಒಬ್ಬ ಬಾಲಕಿ ದುರಳರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ.

ಮಂಗಳೂರಿನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಹಿಂದೂ ಯುವತಿಯನ್ನು ಕೇರಳ ಮೂಲದ ಮುಹಮ್ಮದ್ ಅಶ್ಫಾಕ್ ಅಪಹರಿಸಿದ್ದಾನೆ. ಮಣಿಪಾಲದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಪರ್ವೇಜ್ ಉಮರ್ನನ್ನ ಅಪಹರಿಸಿದ ಪೈಝಲ್, ದಾವುದ್ ಇಬ್ರಾಹಿಂ, ಇಸಾಕ್ ಹಲ್ಲೆ ನಡೆಸಿ ಗಾಂಜಾ ದಂಧೆಯಲ್ಲಿ ಹಫ್ತಾ ನೀಡುವಂತೆ ಒತ್ತಾಯಿಸಿದ್ದಾರೆ.

ಪರಮೇಶ್ವರ್ ಅವರು ಗೃಹ ಇಲಾಖೆ ಮುನ್ನೆಡಸಲು ಅಸಮರ್ಥರಾಗಿರುವ ಕಾರಣ ರಾಜೀನಾಮೆ ನೀಡಬೇಕು. ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ಸೋತಿರುವ ಸಿದ್ದರಾಮಯ್ಯ ಸರ್ಕಾರ ವಿಸರ್ಜನೆಯಾಗಬೇಕು ಎಂದು ಬಿಜೆಪಿ ಕಿಡಿಕಾರಿದೆ.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!