Ad imageAd image

“ಯೋಗದಿಂದ ಆಯುಷ್ಯವೂ ವೃದ್ದಿ” ನಂದವಾಡಗಿಯ ಶ್ರೀಗಳು

Bharath Vaibhav
“ಯೋಗದಿಂದ ಆಯುಷ್ಯವೂ ವೃದ್ದಿ” ನಂದವಾಡಗಿಯ ಶ್ರೀಗಳು
WhatsApp Group Join Now
Telegram Group Join Now

ಇಲಕಲ್: ಇಂದು ABT ಗುರುಕುಲ ನಂದವಾಡಗಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲಾ ಮಕ್ಕಳು ಹಾಗೂ ಶಾಲಾ ಶಿಕ್ಷಕವೃಂದದವರು ಯೋಗವನ್ನು ಮಾಡುವುದರ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಮಠದ ಹಿರಿಯ ಪುಜ್ಯರಾದ  ತಪೋನಿದಿ ಮಹಾಂತಲಿಂಗ ಶಿವಾಚಾರ್ಯರು ಯೋಗವನ್ನು ಮಾಡುವುದರಿಂದ ಮನುಷ್ಯನ ಆಯುಷ್ಯವು ವೃಂದಿ ಆಗುತ್ತದೆ.


ಹಾಗೂ ನಮ್ಮ ಮನಸ್ಸು ಕೂಡಾ ಚೈತನ್ಯವು ಆಗುತ್ತದೆ ಎಂದು ಹೇಳಿ ತಮ್ಮ ಹಿತನುಡಿಗಳನ್ನು ಶಾಲಾ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಮತ್ತು  ಮಠದ ಕಿರಿಯ ಪೂಜ್ಯಾರಾದ ಡಾ. ಅಭಿನವ  ಚೆನ್ನಬಸವ ಶಿವಾಚಾರ್ಯರು ಯೋಗವನ್ನು ಮಾಡುವುದರಿಂದ ನಾವು ನಿರೋಗಿ ಆಗಿ ಬದುಕನ್ನು ಸಾಗಿಸಬಹುದು ಎಂದು ತಿಳಿಸಿದರು. ಶಾಲಾ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ ABT ಗುರುಕುಲ ನಂದವಾಡಗಿ ಉಪಸ್ಥಿತರಿದ್ದರು.

ವರದಿ: ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!