Ad imageAd image

ಶಿಕ್ಷಕರ ದಿನಾಚರಣೆ: ರೋಗಿಗಳಿಗೆ ಹಣ್ಣು ವಿತರಣೆ

Bharath Vaibhav
ಶಿಕ್ಷಕರ ದಿನಾಚರಣೆ: ರೋಗಿಗಳಿಗೆ ಹಣ್ಣು ವಿತರಣೆ
WhatsApp Group Join Now
Telegram Group Join Now

ಭಾಲ್ಕಿ:ಶಿಕ್ಷಕರ ದಿನಾಚರಣೆಯ ಅಂಗವಾಗಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ಒಳಗೊಂಡ ಕಲ್ಯಾಣ ಕರ್ನಾಟಕ ಶಿಕ್ಷಕರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಬಾಲಾಜಿ ಬೈರಾಗಿ ಅವರ ಅಧ್ಯಕ್ಷತೆಯಲ್ಲಿ ಭಾಲ್ಕಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಸಂಘದ ವತಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿ,ಸಮಾಜ ಸೇವೆಯ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡುವ ಮೂಲಕ ಸಾರ್ಥಕಗೊಳಿಸಲಾಯಿತು.

ಬಾಲಾಜಿ ಬೈರಾಗಿ ಮಾತನಾಡಿ ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಅವರು ಸಮಾಜದಲ್ಲಿ ಮೌಲ್ಯಗಳ ಬೆಳಕನ್ನು ಹರಡುವವರು. ಶಿಕ್ಷಕರ ದಿನವನ್ನು ವಿದ್ಯಾರ್ಥಿಗಳಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬರ ಜೀವನವನ್ನು ಸ್ಪರ್ಶಿಸುವ ದಿನವನ್ನಾಗಿಸಬೇಕು. ರೋಗಿಗಳಿಗೆ ಧೈರ್ಯ ತುಂಬುವುದು ನಮ್ಮ ಮಾನವೀಯ ಜವಾಬ್ದಾರಿಯಾಗಿದೆ.ಸಾಮಾಜಿಕ ಸೇವೆಗಳು ಮಾಡುವ ಮೂಲಕ ಗುರುಗಳಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾನವೀಯತೆ, ಕರುಣೆ, ಸೇವಾಭಾವನೆಗಳನ್ನು ಪ್ರತಿಪಾದಿಸುವ ಈ ಕಾರ್ಯ ಸಮಾಜಕ್ಕೆ ಪ್ರೇರಣೆಯಾಗಿದ್ದು, ಇತರ ಸಂಘಟನೆಗಳಿಗೂ ಮಾದರಿಯಾಗಿದೆ.

ಕಾರ್ಯಕ್ರಮದಲ್ಲಿ ಸಂತೋಷ ವಾಡೆ,ವಿಶ್ವನಾಥ ಕರಕರೇ,ಅಶೋಕ ಬಿರಾದರ,ರಾಜಶೇಖರ,ನೀಲಕಂಠ ಕುರುಣೆ,ವಿಜಯಕುಮಾರ,ಜಗನಾಥ ಸೋನೆ,ಭೀಮಣ್ಣ ಕೊಂಕಣಿ,ಅಶೋಕ ಮಲ್ಲೇಶಿ,ಹಣಮಶೆಟ್ಟಿ, ರಾಜಕುಮಾರ,ಬಸವರಾಜ,ಸತೀಶ,ಯಲ್ಲಪ್ಪ ಸೇರಿದಂತೆ ಅನೇಕ ಪದಾಧಿಕಾರಿಗಳು,ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ವರದಿ:ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!