ಬೆಳಗಾವಿ: ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಿನಾಂಕ 21.06.2025 ರಂದು ಬೆಳಗಾವಿನ ಶಹರದ ಹೆಸರಾಂತ ಬ್ಯಾಟರಿ ಚಾಲಿತ ದ್ವಿಚಕ್ರ ತಯಾರಕರು ಎಂದೇ ಖ್ಯಾತಿಯಾಗಿರುವ A D M S ಮ್ಯಾನೇಜಿಂಗ್ ಡೈರೆಕ್ಟರ್ ಆದಂತಹ ಅಶೋಕ್ ತಂಗಡಿ ಅವರ ಮೇಲೆ ಪ್ರಥಮ ತನಿಖಾ ವರದಿ ನಂಬರ್ ಕ್ರಮಾಂಕ 72 ಅಡಿಯಲ್ಲಿ ದೂರು ದಾಖಲಾಗಿತ್ತು.
ನ್ಯಾಯಾಲಯವು ಆರೋಪಿಯಾದ ಎಡಿಎಂಎಸ್ ಮ್ಯಾನೇಜಿಂಗ್ ಡೈರೆಕ್ಟರ್ ಆದಂತಹ ಅಶೋಕ್ ತಂಗಡಿಯವರಿಗೆ ಬೇಲ್ ನಿರಾಕರಿಸಿದೆ. ದೂರುದಾರರಾದ ಆಮ್ರೀನ್ ಹಾಗೂ ಇತರರು ಅವರು ದೂರನ್ನು ನೀಡಿರುತ್ತಾರೆ ದೂರಿನಲ್ಲಿ ತಮ್ಮ ಮನೆಯಲ್ಲಿದ್ದ ಎರಡು ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಹೋಗಿದ್ದು ಹಾಗೂ 3,39,000 ಮೌಲ್ಯದ ಬಂಗಾರವನ್ನು ತೆಗೆದುಕೊಂಡು ಹೋಗಿದ್ದು ಅಷ್ಟೇ ಅಲ್ಲದೆ ಜೀವ ಬೆದರಿಕೆ ಒಡ್ಡಿದ್ದು ಕೂಡ ದೂರು ದಾಖಲಾಗಿರುತ್ತದೆ ಈ ದೂರಿನ ಅನ್ವಯ ಆರೋಪಿತರು ಇರುತ್ತಾರೆ. A 01 ಅಶೋಕ್ ತಂಗಡಿ ಮತ್ತು ಇತರರು ಆಗಿರುತ್ತಾರೆ. ಇದೇ ವಿಷಯದ್ ಅಂಗವಾಗಿ ಆರೋಪಿ ಅಶೋಕ್ ತಂಗಡಿ ಆಂಟಿಸೆಪ್ಟರಿ ಬೇಲ್ ತೆಗೆದುಕೊಂಡಿದ್ದು ಇರುತ್ತದೆ ಇದೀಗ ದಿನಾಂಕ 29 8 2025 ರಂದು FTSC ನ್ಯಾಯಾಲಯ ಬೇಲ್ ನಿರಾಕರಿಸಿದ್ದು, ಪೊಲೀಸ್ ಇಲಾಖೆ ಏನು ಕ್ರಮ ಕೈಗೊಳ್ಳಲಿದೆ ಅಂತ ಕಾದು ನೋಡಬೇಕು.
ವರದಿ: ಗುರುರಾಜ ಹಂಚಾಟೆ




