———————————————-ರಣಜಿ ಕ್ರಿಕೆಟ್ ಪಂದ್ಯಾವಳಿ ಎಲೈಟ್ ಬಿ’ ಗುಂಪು
——————————–5 ಪಂದ್ಯಗಳಿಂದ 21 ಪಾಯಿಂಟ್: ಬಿ, ಗುಂಪಿನಲ್ಲಿ ಅಗ್ರಸ್ಥಾನ

–ಪಂದ್ಯದಲ್ಲಿ 10 ವಿಕೆಟ್ ಪಡೆದ ಶ್ರೇಯಸ್ ಗೋಪಾಲ್
ಹುಬ್ಬಳ್ಳಿ: ಕರ್ನಾಟಕ ಕ್ರಿಕೆಟ್ ತಂಡವು ಚಂದಿಗಢ ವಿರುದ್ಧ ಇಲ್ಲಿ ನಡೆದ ಎಲೈಟ್ ಬಿ, ಗುಂಪಿನ ಲೀಗ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 185 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪೂರ್ಣ 7 ಪಾಯಿಂಟ್ ಗಳನ್ನು ಸಂಪಾದಿಸಿ ಒಟ್ಟು 21 ಅಂಕಗಳ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಜಿಗಿಯಿತು.
ಇಲ್ಲಿನ ಕೆ.ಎಸ್.ಸಿ. ಕ್ರೀಡಾಂಗಣದಲ್ಲಿ ಮೂರನೇ ದಿನವಾದ ಇಂದು ಚಂದಿಗಢ ತಂಡವನ್ನು ಅದರ ದ್ವಿತೀಯ ಇನ್ನಿಗ್ಸ್ ನಲ್ಲಿ 140 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಕರ್ನಾಟಕದ ಬೌಲರುಗಳು ಯಶಸ್ವಿಯಾದರು. ಕರ್ನಾಟಕದ 8 ವಿಕೆಟ್ ಗೆ 547 ಡಿಕ್ಲೇರ್ ಮೊತ್ತಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್ ನಲ್ಲಿ 222 ರನ್ ಗಳಿಗೆ ಆಲೌಟ್ ಆದ ಚಂದಿಗಢ ತಂಡವು ಫಾಲೋ ಆನ್ ಪಡೆದು ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 140 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಾಗೂ 185 ರನ್ ಗಳಿಂದ ಪರಾಭವಗೊಂಡಿತು.
ಕರ್ನಾಟಕ ಈ ಪಂದ್ಯದಲ್ಲಿ ಪೂರ್ಣ ಏಳು ಪಾಯಿಂಟ್ ಗಳನ್ನು ಪಡೆಯುವ ಮೂಲಕ ಒಟ್ಟು ತಾನಾಡಿದ 5 ಲೀಗ್ ಪಂದ್ಯಗಳಿಂದ 21 ಅಂಕಗಳನ್ನು ಪಡೆದು ಬಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಿತು. 17 ಅಂಕಗಳನ್ನು ಪಡೆದ ಮಹಾರಾಷ್ಟ್ರ ದ್ವಿತೀಯ ಹಾಗೂ ಮಧ್ಯ ಪ್ರದೇಶ 15 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದೆ.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 8 ವಿಕೆಟ್ ಗೆ 547 ಡಿಕ್ಲೇರ್
ಚಂದಿಗಢ ಮೊದಲ ಇನ್ನಿಂಗ್ಸ್ 222 ( ಮನನ್ ವೋರಾ 106 ), ಶ್ರೇಯಸ್ ಗೋಪಾಲ್ 73 ಕ್ಕೆ 7)
ಶಿಖರ್ ಶೆಟ್ಟಿ 43 ಕ್ಕೆ 2),
ಚಂದಿಗಢ ಫಾಲೋ ಆನ್ ನಲ್ಲಿ 140 ( ಶಿವಂ ಬಂಬಾರಿ 43, ರಾಜ್ ಬವಾ 27, ಶಿಖರ್ ಶೆಟ್ಟಿ 61 ಕ್ಕೆ 5)
ಶ್ರೇಯಸ್ ಗೋಪಾಲ್ 45 ಕ್ಕೆ 3)
ಪಂದ್ಯ ಶ್ರೇಷ್ಠ: ಸಮರನ್ ರವಿಚಂದ್ರನ್




