Ad imageAd image

ಕನ್ನಡ ಮಾತನಾಡಲು ಹಿಂದೇಟು: ಬ್ಯಾಂಕ್ ಉದ್ಯೋಗಿ ಮೊಂಡುತನ

Bharath Vaibhav
ಕನ್ನಡ ಮಾತನಾಡಲು ಹಿಂದೇಟು: ಬ್ಯಾಂಕ್ ಉದ್ಯೋಗಿ ಮೊಂಡುತನ
WhatsApp Group Join Now
Telegram Group Join Now

ಬೆಂಗಳೂರುರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನವಾಗಿದ್ದು, ಬ್ಯಾಂಕ್ ಉದ್ಯೋಗಿಯೊಬ್ಬರು ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ್ದಾರೆ.

ಬೆಂಗಳೂರಿನ ಸರ್ಜಾಪುರದ ಬಳಿಯ ಎಸ್ ಬಿಐ ಬ್ಯಾಂಕ್ಸ್ ಶಾಖೆಯಲ್ಲಿ ಘಟನೆ ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಮೊಂಡುತನದ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ, ಆಕ್ರೋಶ ವ್ಯಕ್ತವಾಗತೊಡಗಿದೆ.

ದಾಖಲಾಗಿರುವ ವಿಡಿಯೋ ಪ್ರಕಾರ ಇಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದರೂ ಗ್ರಾಹಕರೊಟ್ಟಿಗೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ್ದಾರೆ. ಇದನ್ನು ಗ್ರಾಹಕರು ಪ್ರಶ್ನಿಸಿದ್ದಾರೆ.

ಗ್ರಾಹಕರಿಗೂ ಮೊಂಡುತನದ ಉತ್ತರ ನೀಡಿರುವ ಸಿಬ್ಬಂದಿ, ನನಗೆ ಕನ್ನಡ ಬರುವುದಿಲ್ಲ, ನಾನು ಹಿಂದಿಯಲ್ಲೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಕನ್ನಡಪರ ಹೋರಾಟಗಾರರು ಈವಿಡಿಯೋವನ್ನು ಹಂಚಿಕೊಂಡಿದ್ದು, ಬ್ಯಾಂಕ್ ನ್ನು ಟ್ಯಾಗ್ ಮಾಡಿ ಉದ್ಧಟತನ ತೋರಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆಇತ್ತೀಚೆಗೆ ಕೋರಮಂಗಲದ ಹೋಟೆಲ್ ಒಂದರಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಬರಹವನ್ನು ಪ್ರದರ್ಶನ ಫಲಕದಲ್ಲಿ ಬರೆಯಲಾಗಿತ್ತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!