ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಚುನಾವಣೆ ಈಗಾಗಲೇ ನಿಗದಿಯಾಗಿದ್ದು ಕಾರ್ಮಿಕರ ಸಂಘದ ಚುನಾವಣೆಗೆ ಪಕ್ಷಗಳು ಬಿರುಸಿನ ಪಕ್ಷ ಸಂಘಟನೆ ಪಕ್ಷ ಸೇರ್ಪಡೆಯಲ್ಲಿ ತೊಡಗಿವೆ.
ಎ ಐ ಟಿ ಯು ಸಿ ತಕ್ಕಡಿ ಪಕ್ಷದ ಸಂಘಟನೆ ಇಂದ ಕಾರ್ಮಿಕರು ಬೇಸರಗೊಂಡಿದ್ದು ಚುನಾವಣೆಗೆ ಮೊದಲು ನೀಡಿದ ಭರವಸೆಗಳನ್ನು ಈಡೇರಿಸದ ಮತ್ತು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸದ ಪಕ್ಷದ ಮುಖಂಡರ ವಿರುದ್ಧ
ಹಲವಾರು ಬಾರಿ ತಮ್ಮ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಮಾಡಿದ ಘಟನೆಯು ಸಹ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನಡೆದಿದೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದ ಎ ಐ ಟಿ ಯು ಸಿ ತಕ್ಕಡಿ ಪಕ್ಷದ ಚುನಾಯಿತ ಸದಸ್ಯರು ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಕಾರ್ಮಿಕರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಎ ಐ ಟಿ ಯು ಸಿ ತಕ್ಕಡಿ ಪಕ್ಷದ ಸದಸ್ಯರಲ್ಲಿ ಎಲ್ಲವೂ ಸರಿ ಇಲ್ಲ ಅನ್ನುವುದು ಕೆಲ ದಿನಗಳಿಂದ ಪಕ್ಷದಲ್ಲಿಯೇ ಎರಡು ಭಾಗವಾಗಿ ಒಬ್ಬರಿಗೆ ಕಂಡರೆ ಒಬ್ಬರಿಗೆ ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಎ ಐ ಟಿ ಯು ಸಿ ಪಕ್ಷದಲ್ಲಿ ಸಂಗ್ರಹವಾಗಿರುವ ಒಂದು ಕೋಟಿ ಆರು ಲಕ್ಷ ರೂಪಾಯಿ ಹಣ ಸಂಗ್ರಹವಾಗಿದ್ದು ಅದರಲ್ಲಿ 96 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಪಕ್ಷದ ಮುಖಂಡರಿಗೆ ತಿಳಿಸಿದಾಗ ನಮ್ಮ ಗಮನಕ್ಕೆ ತರದೆ ಇಷ್ಟೊಂದು ಹಣ ಖರ್ಚು ಮಾಡಿರುವ ಲೆಕ್ಕಪತ್ರ ನೀಡಿ ಎಂದು ಶಾಂತಪ್ಪ ಆನ್ವರಿ ಕೆಲ ಸದಸ್ಯರು ಪ್ರಶ್ನೆಸಿದಾಗ ಲೆಕ್ಕ ಪತ್ರದ ವಿವರ ನೀಡದೆ ಆಡಿಟ್ ವರದಿಯ ಪ್ರತಿಯನ್ನು ನೀಡಿದ್ದಾರೆ, ಆದರೆ ಇದಕ್ಕೆ ಒಪ್ಪದ ಶಾಂತಪ್ಪ ಆನ್ವರಿ ಪ್ರತಿಯೊಂದು ಖರ್ಚಿನ ವಿವರ ನೀಡಿ ಎಂದು ಕೇಳಿದಾಗ ಲೆಕ್ಕ ಪತ್ರದ ವಿವರ ನೀಡಲು ನಿರಕರಿಸಿದ್ದಾರೆಂದು ತಿಳಿದು ಬಂದಿದೆ.
ಈಗಾಗಲೇ ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಮಿಕ ಸಂಘದ ಚುನಾವಣೆ ಘೋಷಣೆಯಾದ ನಂತರ ಎ ಐ ಟಿ ಯು ಸಿ ಪಕ್ಷದಿಂದ ಸಭೆ ಕರಿಯಲಾಗಿತ್ತು ಈ ಸಭೆಯಲ್ಲಿ 14 ಜನ ಸದಸ್ಯರನ್ನು ಕೈ ಬಿಟ್ಟು ಸಭೆ ನಡೆಸಲು ಮುಂದಾದ ವಿಜಯ ಭಾಸ್ಕರ್ ವರ್ತನೆಗೆ ಬೇಸತ್ತು ಪ್ರತ್ಯೇಕವಾಗಿ ಎಸ್ಎಂ ಶಫಿ ನೇತೃತ್ವದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಗೆಸ್ಟ್ ಹೌಸ್ ನಲ್ಲಿ ಎಸ್ ಎಂ ಶಫಿ ಹಿತೈಷಿಗಳು ಪ್ರತ್ಯೇಕವಾಗಿ ಸಭೆಯಲ್ಲಿ ಭಾಗವಹಿಸಿ ನೀವು ಯಾವುದೇ ಕಾರಣಕ್ಕೂ ಎ ಐ ಟಿ ಯು ಸಿ ಪಕ್ಷಕ್ಕೆ ಹೋಗಬೇಡಿ ನಾವು 14 ಜನ ಚುನಾಯಿತ ಪ್ರತಿನಿಧಿ ಮಾಜಿ ಸದಸ್ಯರು ನಿಮ್ಮ ಜೊತೆಗೆ ಇದ್ದೇವೆ ಈಗಾಗಲೇ ಎ ಐ ಟಿ ಯು ಸಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಅದರ ಜೊತೆಗೆ ನಾವು ಹೋದರೆ ಈ ಬಾರಿ ಚುನಾವಣೆಯಲ್ಲಿ ಸೋಲುವುದು ಖಂಡಿತ ಎಂದು ತಿಳಿಸಿದರು ಎನ್ನಲಾಗುತ್ತಿದೆ.
ಈ ಸಭೆಯಲ್ಲಿ ನೂರಾರು ಜನ ಭಾಗವಹಿಸಿ ಈಗ ನಡೆಯುವ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೀವು ಸ್ಪರ್ಧೆ ಮಾಡಬೇಕು ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಘೋಷಣೆ ಕೂಗಿದರು ನಂತರ ಗೋ ಬ್ಯಾಕ್ ವಿಜಯ ಭಾಸ್ಕರ್ ಎಂದು ಘೋಷಣೆ ಕೂಗುವ ಮೂಲಕ ವಿಜಯ ಭಾಸ್ಕರ್ ಇವರಿಗೆ ಈ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಸಂದೇಶ ನೀಡಿದಂತಾಗಿದೆ
ವಿಜಯ ಭಾಸ್ಕರ್ ನಡೆಸಿದ ಸಭೆಯಲ್ಲಿ ಬ್ಲಾಕ್ ಮೇಲ್ ಮತ್ತು ಗೂಂಡಾ ವರ್ತನೆ ತೋರಿದವರಿಗೆ ಈ ಬಾರಿ ನಮ್ಮ ಪಕ್ಷದಲ್ಲಿ ಟಿಕೆಟ್ ನೀಡಲಾಗುವುದಿಲ್ಲ ಅನ್ನುವ ಮಾತು ಕೇಳಿಬಂದಿದೆ..?
ಹಟ್ಟಿ ಚಿನ್ನದ ಗಣಿ ಕಂಪನಿ ಕಾರ್ಮಿಕ ಸಂಘದ ಚುನಾವಣೆ ದಿನಾಂಕ ನಿಗದಿಯಾಗಿದ್ದು ಈಗ ಎ ಐ ಟಿ ಯು ಸಿ ತಕ್ಕಡಿ ಪಕ್ಷದಲ್ಲಿ ತಕ್ಕಡಿ ಎರಡು ತುಕ್ಕಡಿ ಆದಂತೆ ಕಾಣುತ್ತದೆ..?
ಒಂದು ಬದಿಯಲ್ಲಿ ವಿಜಯ ಭಾಸ್ಕರ್, ಇನ್ನೊಂದು ಬದಿಯಲ್ಲಿ ಎಸ್ಎಂ ಶಫಿ ಈ ಇಬ್ಬರ ಮುಖಂಡರಿಂದ ಎ ಐ ಟಿ ಯು ಸಿ ತಕ್ಕಡಿ ಪಕ್ಷದಲ್ಲಿ ಬೇರೆ ಬೇರೆ ಆಗಿರುವುದರಿಂದ ತಕ್ಕಡಿ ಎರಡು ತುಕ್ಕಡಿ ಆದಂತೆ ಕಾಣುತ್ತದೆ
ಈಗಾಗಲೇ ಎಸ್ ಎಂ ಶಫೀ ಬೇರೆ ಪಕ್ಷದತ್ತ ಮನಸು ಮಾಡಿದ್ದು ಅವರ ಜೊತೆಗೆ ಅವರ ಹಿತೈಷಿಗಳಾದಂತ ಎ ಐ ಟಿ ಯು ಸಿ ತಕ್ಕಡಿ ಪಕ್ಷದಿಂದ ದೂರವಿರುವ 14 ಜನ ಸದಸ್ಯರು ಜೊತೆ ನಿಂತಿದ್ದು ಎಸ್ ಎಂ ಶಫಿ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಈ ಬಾರಿ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುವ ಪ್ರಯತ್ನದಲ್ಲಿ ಈ 14 ಜನ ಸದಸ್ಯರು ಒಗ್ಗೂಡಿ ಪ್ರಯತ್ನ ನಡೆಸಿದ್ದಾರೆ ಎನ್ನ ಲಾಗುತ್ತಿದೆ,
ಈಗಾಗಲೇ ಎ ಐ ಟಿ ಯು ಸಿ ತಕ್ಕಡಿ ಪಕ್ಷದಲ್ಲಿ ಹೊಸ ಅಭ್ಯರ್ಥಿಗಳ ಹುಡುಕಾಟದಲ್ಲಿ ಮತ್ತು ಪಕ್ಷ ಸಂಘಟನೆಯಲ್ಲಿ ಮುಂದಾಗಿದೆ ಎಂದು ತಿಳಿದು ಬಂದಿದೆ.
ಪಕ್ಷದಿಂದ ದೂರ ಇರುವ 14 ಜನ ಸದಸ್ಯರು ನಮಗೆ ಟಿಕೆಟ್ ನೀಡದೇ ಪಕ್ಷ ನಮಗೆ ದ್ರೋಹ ಮಾಡಿದೆ ಪಕ್ಷಕ್ಕಾಗಿ ನಾವು ದುಡಿದಿದ್ದೇವೆ ನಾವು ಆ ಚುನಾವಣೆಯಲ್ಲಿ ಜಯಶಾಲಿಯಾಗದಿದ್ದರೆ ಎಐಟಿಯುಸಿ ಪಕ್ಷ ಅಧಿಕಾರಕ್ಕೆ ಎಲ್ಲಿ ಬರುತ್ತಿತ್ತು ನಮ್ಮ ಮೇಲೆ ಬ್ಲಾಕ್ ಮೇಲ್ ಮತ್ತು ಗುಂಡ ವರ್ತನೆಯ ಆರೋಪ ಮಾಡುತ್ತಿರುವ ಮುಖಂಡರನ್ನು ಈ ಬಾರಿ ಚುನಾವಣೆಯಲ್ಲಿ ಅವರನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ
ಈಗಾಗಲೇ ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಮಿಕರು ಎ ಐ ಟಿ ಯು ಸಿ ತಕ್ಕಡಿ ಪಕ್ಷದ ದಿಂದ ಬೇಸತ್ತು ಈ ಹಿಂದೆ ನೀಡಿದ ಭರವಸೆಗಳು ಒಂದು ಈಡೇರದ ಕಾರಣ ಮತ್ತು ಸಮಯಕ್ಕೆ ಸರಿಯಾಗಿ ಬಂದು ನಮ್ಮ ಕಾರ್ಮಿಕರ ಸಮಸ್ಯೆಗಳನ್ನು ಕೇಳದೆ ಇರುವ ಇಂತಹ ಪಕ್ಷ ನಮಗೆ ಬೇಕೆ..?
ಈ ಬಾರಿ ಚುನಾವಣೆಯಲ್ಲಿ ನಮ್ಮ ಕಾರ್ಮಿಕರ ಸಮಸ್ಯೆಯನ್ನು ಹಾಲಿಸುವಂಥ ನಮ್ಮ ಸಮಸ್ಯೆಗೆ ಸ್ಪಂದಿಸುವಂತಹ ಮತ್ತು ನಮ್ಮ ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಒಂದು ಒಳ್ಳೆ ಪಕ್ಷಕ್ಕೆ ನಾವು ಮತ ಹಾಕಿ ಗೆಲ್ಲಿಸುವ ನಿರ್ಧಾರ ಚಿನ್ನದ ಗಣಿಯ ಕಾರ್ಮಿಕರು ಮಾಡಿದ್ದಾರೆಂದು ತಿಳಿದು ಬಂದಿದೆ
ಹಲವಾರು ವರ್ಷಗಳಿಂದ ಸ್ಥಳೀಯ ನಾಯಕರಾಗಿ ಕಾರ್ಮಿಕರ ಹಿತ ದೃಷ್ಟಿಯಿಂದ ಕಾರ್ಮಿಕರ ಏಳಿಗೆಗಾಗಿ ನಿರಂತರ ಕಾರ್ಮಿಕರಿ ಗೋಸ್ಕರವಾಗಿ ಶ್ರಮಿಸಿದಂತ ವ್ಯಕ್ತಿ ಎಸ್ ಎಂ ಶಫೀ ಇವರನ್ನು ಕೆಲ ಕಾರ್ಮಿಕ ಮುಖಂಡರನ್ನು ಎ ಐ ಟಿ ಯು ಸಿ ತಕ್ಕಡಿ ಪಕ್ಷ ದೂರವಿದ್ದಿರುವುದು ನೋಡಿದರೆ ಮುಂದಿನ ಚಿನ್ನದ ಗಣಿ ಕಾರ್ಮಿಕರ ಚುನಾವಣೆಯಲ್ಲಿ ಈ ಪಕ್ಷದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದನ್ನು ಕಾಯ್ದು ನೋಡೋಣ
ವರದಿ : ಶ್ರೀನಿವಾಸ ಮಧುಶ್ರೀ




