——————————————————————-ಐಪಿಎಲ್: ನಾಯಕ ಶ್ರೇಯಸ್ ಮಿಂಚಿನ ಬ್ಯಾಟಿಂಗ್
——————————————————————–ಪಂದ್ಯ ಶ್ರೇಷ್ಠ: ಶ್ರೇಯಸ್ ಅಯ್ಯರ
ಅಹ್ಮದಾಬಾದ್: ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಇರಿಸಿಕೊಂಡಿದ್ದ ನಂಬಿಕೆಯನ್ನು ಆ ತಂಡದ ನಾಯಕ ಶ್ರೇಯಸ್ ಅಯ್ಯರ ಅಕ್ಷರಸ: ಉಳಿಸಿಕೊಂಡರು. ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯ ಕ್ವಾಲಿಪಾಯರ್-2 ಪಂದ್ಯದಲ್ಲಿ ಶ್ರೇಯಸ್ ಅಯ್ಯರ ಇದನ್ನು ಸಾಭೀತು ಮಾಡಿದರು.

—————-ಶ್ರೇಯಸ್ ಅಯ್ಯರ
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಯಕನ ಜವಾಬ್ದಾರಿಯುತ ಆಟವಾಡಿದ ಶ್ರೇಯಸ್ ತನ್ನ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ ಎಂಬ ದಡ ತಲುಪಿಸಿದರು. ಗೆಲ್ಲಲು 204 ರನ್ ಗಳಿಸಬೇಕಿದ್ದ ಪಂಜಾಬ್ ಕಿಂಗ್ಸ್ ತಂಡ 19 ಓವರುಗಳಲ್ಲಿ 5 ವಿಕೆಟ್ ಗೆ 207 ರನ್ ಗಳಿಸಿ ಪ್ರತಿಷ್ಠಿತ ಪಂದ್ಯಾವಳಿಯ ಫೈನಲ್ ತಲುಪಿತು.
ಶ್ರೇಯಸ್ ಅಯ್ಯರ ಅಜೇಯ 87 ರನ್ ಗಳನ್ನು ಕೇವಲ 41 ಎಸೆತಗಳಲ್ಲಿ ಚಚ್ಚಿದರು. ಈ ಇನ್ನಿಂಗ್ಸ್ ನಲ್ಲಿ ಅವರ ಬ್ಯಾಟ್ ನಿಂದ 5 ಬೌಂಡರಿ ಹಾಗೂ 8 ಅದ್ಭುತ ಸಿಕ್ಸರ್ ಗಳು ಸಿಡಿದವು. ಇವರಿಗೆ ಸಾಥ್ ನೀಡಿದ ನೇಹಲ್ ವಢೇರಾ 48 ರನ್ ಗಳಿಸಿದರು. ಜೋಶ್ ಇಂಗ್ಲೀಷ್ 38 ರನ್ ಗಳ ಬಹುಮೂಲ್ಯ ಕಾಣಿಕೆಯನ್ನು ತಂಡಕ್ಕೆ ನೀಡಿದರು. ಇದರಿಂದ ಪಂಜಾಬ್ ಕಿಂಗ್ಸ್ ಮತ್ತೊಮ್ಮೆ ಫೈನಲ್ ತಲುಪಿದ ಸಾಧನೆ ಮಾಡಿತು.
ಮಳೆಯಿಂದ ಆಟ ವಿಳಂಭ: ಇದಕ್ಕೆ ಮುನ್ನ ಇಂದು ಆಟ ಮಳೆಯಿಂದ ವಿಳಂಭವಾಗಿ ಆರಂಭವಾಯಿತು. ಆದರೂ ಪೂರ್ಣ 20 ಓವರುಗಳ ಆಟ ಆಡಿಸಲಾಯಿತು. ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ 6 ವಿಕೆಟ್ ಗೆ 203 ರನ್ ಗಳಿಸಿತು.
ಸ್ಕೋರ್ ವಿವರ:
ಮುಂಬೈ ಇಂಡಿಯನ್ಸ್ 20 ಓವರುಗಳಲ್ಲಿ 6 ವಿಕೆಟ್ ಗೆ 203
ಸೂರ್ಯಕುಮಾರ್ ಯಾದವ್ 44 ( 26 ಎಸೆತ, 4 ಬೌಂಡರಿ, 3 ಸಿಕ್ಸರ್), ತಿಲಕ್ ವರ್ಮಾ 44 ( 29 ಎಸೆತ, 2 ಬೌಂಡರಿ, 2 ಸಿಕ್ಸರ್)
ಬ್ರಿಸ್ಟೋವ್ 38 ( 24 ಎಸೆತ, 3 ಬೌಂಡರಿ, 2 ಸಿಕ್ಸರ್) ನಮನ್ ಧೀರ್ 37 ( 18 ಎಸೆತ, 7 ಬೌಂಡರಿ) ಅಜಮತುಲ್ಲಾಹ 43 ಕ್ಕೆ 2)
ಪಂಜಾಬ್ ಕಿಂಗ್ಸ್ 19 ಓವರುಗಳಲ್ಲಿ 5 ವಿಕೆಟ್ ಗೆ 207
ಶ್ರೇಯಸ್ ಅಯ್ಯರ ಅಜೇಯ 87 ( 41 ಎಸೆತ, 5 ಬೌಂಡರಿ, 8 ಸಿಕ್ಸರ್) ನೇಹಾ ವಢೇರಾ 48 ( 29 ಎಸೆತ, 4 ಬೌಂಡರಿ, 2 ಸಿಕ್ಸರ್)
ಜೋಶ್ ಇಂಗ್ಲಿಷ್ 38 ( 21 ಎಸೆತ, 5 ಬೌಂಡರಿ, 2 ಸಿಕ್ಸರ್) ಅಶ್ವನಿ ಕುಮಾರ್ 55 ಕ್ಕೆ 2)
———————————————————————————————




