ಮುದಗಲ್ಲ :- ಯಾವುದೇ ವಿವಾದಗಳಿಲ್ಲದೆ ಐಎಎಸ್ ಅಧಿಕಾರಿಯಾಗಿ ಸರ್ಕಾರಿ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನಿವೃತ್ತರಾಗಿದ್ದ ಜಿ.ಕುಮಾರ್ ನಾಯಕ್ ಇದೀಗ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ತಮ್ಮ ಮೊದಲ ಪ್ರಯತ್ನದಲ್ಲೇ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. ಐಎಎಸ್ ಅಧಿಕಾರಿಯಾಗಿ ಹಲವಾರು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಕುಮಾರ್ ನಾಯಕ್ ಸಾಕಷ್ಟು ಹೆಸರು ಮಾಡಿದ್ದರು.ರಾಯಚೂರು ಲೋಕಸಭೆ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್ ನಾಯ್ಕ ಅವರ ವಿರುದ್ಧ ಕುಮಾರ್ ನಾಯಕ್‌ಶೇ.52ರಷ್ಟು ಮತ ಪಡೆದುಕೊಂಡು ಜಯ ಸಾಧಿಸಿದ್ದಾರೆ.
ಮುದಗಲ್ಲ ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಸಂಭ್ರಮಾಚಾರಣೆ ..
ಪಟ್ಟಣದ ಪೊಲೀಸ್ ಠಾಣಾ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿಯಾದ ತಮ್ಮಣ್ಣ ಗುತ್ತೇದಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮುದುಗಲ್ ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸ ವವನ್ನು ಸಂಭ್ರಮದಿಂದ ಆಚರಿಸಲಾಯಿತು…
ಈ ಶುಭ ಸಂದರ್ಭದಲ್ಲಿ ಮುಜು ಕಿಲ್ಲ, ಮನನ್ ಬೇಗ ಉಸ್ತಾದ್ ,ಕೃಷ್ಣ ಚಲವಾದಿ, ಪುರಸಭೆ ಸದಸ್ಯ ರಾದ ಮೈಬುಬೂ ಕಡ್ಡಿಪುಡಿ,ಬಸವರಾಜ್ ತುರುಡಗಿ, ಈರಣ್ಣ ತಲಿಕಟ್ಟ್, ವೀರಭದ್ರಗೌಡ ತುರಡಗಿ, ಮಹೇಬೂಬ್ ಬಾರಿಗಿಡ್, ರಮೇಶ್ ಛಲವಾದಿ, ರೋಷನ್, ಶಾಬಜ್ ಖಾನ್,ಫರೀದ್ ಕಿಲ್ಲ, ಮಂಜೂರು ಕಿಲ್ಲ, ಮುಂತದವರು ಉಪಸ್ಥಿತರಿದ್ದರು
ವರದಿ:- ಮಂಜುನಾಥ ಕುಂಬಾರ