ಬಳ್ಳಾರಿ: ಒಳ ಮೀಸಲಾತಿ ಘೋಷಣೆ ಮಾಡುವ ಹಿನ್ನೆಲೆ ರಾಜ್ಯಾದ್ಯಂತ ಜಾತಿ ಗಣತಿ ನಡೆದಿದೆ. ಮೇ ಅಂತ್ಯಕ್ಕೆ ಜಾತಿ ಗಣತಿ ಮುಗಿಯುವ ವಿಶ್ವಾಸವಿದೆ. ಜೂನ್ ತಿಂಗಳಲ್ಲಿ ಒಳ ಮೀಸಲಾತಿ ಘೋಷಣೆಯಾಗುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಒಳ ಮೀಸಲಾತಿ ಹೋರಾಟಗಾರ ಹೆಚ್. ಆಂಜನೇಯ ಹೇಳಿದ್ದಾರೆ. ಬಳ್ಳಾರಿಯಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,
ಕೆಲವರು ಬೇಡ ಜಂಗಮರು ಜಾತಿ ಗಣತಿ ಲಾಭ ಪಡೆಯಲು ಯತ್ನ ಮಾಡ್ತಿದ್ದಾರೆ. ನಕಲಿ ಸರ್ಟಿಫಿಕೇಟ್ ತೆಗೆದುಕೊಂಡ್ರೇ ಕೊಟ್ಟವನು ಮತ್ತು ತೆಗೆದುಕೊಂಡವರ ಇಬ್ಬರನ್ನೂ ಜೈಲಿಗೆ ಕಳುಹಿಸುತ್ತೇವೆ. ಮಾದಿಗರ ಹಕ್ಕು ಕಸಿದುಕೊಳ್ಳಲು ಯತ್ನಿಸಿದರೇ ಸುಮ್ಮನೆ ಇರಲು ಸಾದ್ಯವಿಲ್ಲ. ಈ ಬಗ್ಗೆ ಈಗಾಗಲೇ ಆಯೋಗದ ಗಮನಕ್ಕೆ ತರಲಾಗಿದೆ. ಕಳೆದ
ಮೂವತ್ತೈದು ವರ್ಷದಲ್ಲಿ ಮೀಸಲಾತಿ ಪಡೆಯುವುದಕ್ಕಾಗಿ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದ್ರು.




