ಮೊಳಕಾಲ್ಮುರು : ಧಾರ್ಮಿಕ ಕ್ಷೇತ್ರದ ಹರಿಕಾರರಾದ ಬಸವಣ್ಣನ ತತ್ವಗಳನ್ನು ಎಲ್ಲರೂ ಅಳವಡಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಎನ್ ವೈ ಗೋಪಾಲಕೃಷ್ಣರವರು ತಿಳಿಸಿದರು.
ಬುಧುವಾರ ತಾಲ್ಲೂಕು ಆಡಳಿತ ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಬಸವೇಶ್ವರ ಜಯಂತೋತ್ಸವ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಸವಣ್ಣನವರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ 12ನೇ ಶತಮಾನದ ಅವರು ಕೊಟ್ಟಿರುವಂತಹ ಕೊಡುಗೆಯು ಅಪಾರವಾಗಿದ್ದು ಅನುಭವ ಮಂಟಪದಂತಹ ಪುಸ್ತಕ ಭಂಡಾರವನ್ನು ರಚಿಸಿದ ಮಹಾನ್ ಸಂತರು ಆ ಸರಳ ಸಜ್ಜನಿಕೆ ಯಾವುದೇ ಜಾತಿ ಭೇದ ಭಾವವಿಲ್ಲದೆ ಎಲ್ಲರೂ ಒಂದೇ ಎಂದು ತೋರಿಸಿಕೊಟ್ಟವರು. ಬಸವ ಜಯಂತಿ ಗೋಸ್ಕರ ಸೀಮಿತವಾಗದೆ ಬಸವಣ್ಣನವರ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕಾಪು ರಾಮಚಂದ್ರ ರೆಡ್ಡಿ ನಿಕಟ ಪೂರ್ವ ರಾಜ್ಯದ್ಯಕ್ಷರು ಅಖಿಲ ಭಾರತ ವೀರಶೈವ ಮಹಾಸಭಾ ಇವರು ಮಾತನಾಡಿ, ಕಳೆದೆರಡು ದಿನಗಳಿಂದ ಕಾಶ್ಮೀರದಲ್ಲಿ ಉಗ್ರಗಾಮಿಗಳು ಮನಸೋ ಇಚ್ಛೆ ರಕ್ತಪಾತ ಆರಿಸಿದರು ಅದಕ್ಕೆ ಕಾರಣ ದ್ವೇಷ ಅಸೂಯೆ ಇದರಿಂದ ಏನು ಸಾಧಿಸಿದರು ಅನ್ನೋದೇ ಗೊತ್ತಾಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಜೀವನದಲ್ಲಿ ಏಳು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದರು. ಬಸವಣ್ಣನವರು ನಾವು ಬದುಕುವುದು ಒಂದೇ ಅಲ್ಲದೆ ಬೇರೆಯವರನ್ನು ಬದುಕಲು ಬಿಡಬೇಕು ಮತ್ತು ಅವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಹೇಳಿದ್ದಾರೆ ಹೆಸರಿಗೆ ಮಾತ್ರ ವೀರಶೈವ ಅನ್ನುವುದನ್ನು ಬಿಟ್ಟು ಇದರ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂ ಡಿ ಮಂಜುನಾಥ್ ಅಧ್ಯಕ್ಷರು ವೀರಶೈವ ಲಿಂಗಾಯತ ಸಮಾಜ ತಾಲೂಕು ಮತ್ತು ಸೋಮಶೇಖರ ಸ್ವಾಮೀಜಿ ಬ್ರಹ್ಮಗಿರಿ ಮಠ ಅಶೋಕ ಸಿದ್ದಾಪುರ ಇವರು ಕೂಡ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಕಾರ್ಯಕ್ರಮದ ಮುಂಚಿತವಾಗಿ ಶ್ರೀ ಬಸವೇಶ್ವರ ಅಮೂರ್ತಿಯನ್ನು ವಿವಿಧ ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದು ವಿಶೇಷ.
ಈ ಸಂದರ್ಭದಲ್ಲಿ ರೂಪ ವಿನಯ್ ಕುಮಾರ್ ರಾಜ್ಯ ಮಹಿಳಾ ಘಟಕ ನಿರ್ದೇಶಕರು ಅಖಿಲ ಭಾರತ ವೀರಶೈವ ಮಹಾಸಭಾ, ವಿ ಎಲ್ ಸರ್ವಭೂಷಣಯ್ಯ ನಿವೃತ್ತ ಮುಖ್ಯ ಶಿಕ್ಷಕರು ಚಳ್ಳಕೆರೆ ಡಾ. ಪಿಎಂ ಮಂಜುನಾಥ್ ಅಬ್ದುಲ್ ಸುಹಾನ್ ಸಾಬ್ ಎಂ ಡಿ ಮಂಜುನಾಥ್ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಪಿ ಪಾಲಯ್ಯ ಶ್ರೀಮತಿ ನಿರ್ಮಲಾ ದೇವಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೂರಾರು ಅಭಿಮಾನಿಗಳು ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ




