ಗಾಲೆ ( ಶ್ರೀಲಂಕಾ): ಮುಜಬಿಲ್ ಹುಸೇನ್ ಶಾಂತೂ ಹಾಗೂ ಮುಶ್ಫಿಕಿರ ರಹೀಮ್ ಅವರ ಭರ್ಜರಿ ಅರ್ಧ ಶತಕಗಳ ನೆರವಿನಿಂದ ಬಾಂಗ್ಲಾದೇಶ ತಂಡ ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಚಹಾವಿರಾಮದ ನಂತರದ ಆಟದಲ್ಲಿ 3 ವಿಕೆಟ್ ಗೆ 212 ರನ್ ಗಳಿಸಿತ್ತು.
ಮೊದಲ ದಿನ ಮೊದಲು ಬ್ಯಾಟ್ ಮಾಡಲು ಆರಂಭಿಸಿದ ಬಾಂಗ್ಲಾ ತಂಡಕ್ಕೆ ಆರಂಭದಲ್ಲಿಯೇ ಬೇಗ ಎರಡು ವಿಕೆಟ್ ಬಿದ್ದರೂ ನಂತರ ಈ ಇಬ್ಬರ ಭರ್ಜರಿ ಬ್ಯಾಟಿಂಗ್ ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿತು.




