ರಾಯಚೂರು:- ಮಾನ್ವಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಣದಿನ್ನಿ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕನಾದ ಜಾಲ ಪುರ ಮಲ್ಲಯ್ಯ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ನಿಯಮದ ಪ್ರಕಾರ ಪಡಿತರ ಚೀಟಿದಾರರಿಗೆ ಎಲೆಕ್ಟ್ರಾನಿಕ್ ತೂಕದ ಯಂತ್ರದ ಪ್ರಕಾರ ತೂಕ ಮಾಡದೆ ಡಬ್ಬೆಯಿಂದ ಅಳತೆ ಮಾಡುತ್ತಿರುವುದು.
ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕೆ ಪಡಿತರವನ್ನು ಸರಿಯಾಗಿ ವಿತರಣೆ ಮಾಡದೇ ಇರುವುದು,ತಿಂಗಳಲ್ಲಿ ಕೇವಲ ಎರಡು ದಿನ ಮಾತ್ರ ನ್ಯಾಯಬೆಲೆ ಅಂಗಡಿಯನ್ನು ತೆರೆದು ಪಡಿತರರ ವಿತರಣೆ ಮಾಡುತ್ತಿರುವುದು.ಮತ್ತು ಗಣದಿನ್ನಿ ಪಡಿತರ ಚೀಟಿದಾರರಿಗೆ ಮತ್ತು ತಾಲೂಕಿನ ದಂಡಾಧಿಕಾರಿಗಳಿಗೆ ಏಕವಚನದಲ್ಲಿ ನಿಂದಿಸಿರುವುದು.
ಇವೆಲ್ಲ ಅಂಶಗಳನ್ನು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂಬಂಧಪಟ್ಟ ಮೇಲಾಧಿಕಾರಿಗಳು ಬಿವಿ 5 ನ್ಯೂಜಿನಲ್ಲಿ ಈ ಹಿಂದೆ ವರದಿ ಮಾಡಿದ್ದು ವರದಿಯನ್ನು ಪರಿಶೀಲಿಸಿದ ಸಂಬಂಧಪಟ್ಟ ಮೇಲಾಧಿಕಾರಿಗಳು ತಕ್ಷಣ ಜಲಪುರ್ ಮತ್ತು ಗಣದಿನ್ನಿ ಗ್ರಾಮದ ಎರಡು ನ್ಯಾಯ ಬೆಲೆ ಅಂಗಡಿ ಸಂಖ್ಯೆ 29ಸಂಖ್ಯೆ 108/1998-99ಜಾಲಾಪುರ್ ಲಾಗತ್ತು ಗಣದಿನ್ನಿ ನಾಯಬೇಲೆ ಅಂಗಡಿ ಸಂಖ್ಯೆ 116 ಈ ಲೈಸೆನ್ಸ್ ನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ
ವರದಿ:- ಗಾರಲದಿನ್ನಿ ವೀರನ ಗೌಡ.