Ad imageAd image

ಜೈನ ಸಮಾಜದ ಸಮಾವೇಶದಲ್ಲಿ ಪಾಲ್ಗೊಂಡ ಶಾಸಕ ಗಣೇಶ್ ಹುಕ್ಕೇರಿ

Bharath Vaibhav
ಜೈನ ಸಮಾಜದ ಸಮಾವೇಶದಲ್ಲಿ ಪಾಲ್ಗೊಂಡ ಶಾಸಕ ಗಣೇಶ್ ಹುಕ್ಕೇರಿ
WhatsApp Group Join Now
Telegram Group Join Now

ಅಥಣಿ :ಐನಾಪುರದಲ್ಲಿ ಜೈನ ಸಮಾಜದ ಮಹಾಸಮಾವೇಶದಲ್ಲಿ ಶಾಸಕರಾದ  ಗಣೇಶ್ ಹುಕ್ಕೇರಿ ಅವರ ಉಪಸ್ಥಿತಿ.

ಐನಾಪುರ ಪಟ್ಟಣದಲ್ಲಿ ಜೈನ ಸಮಾಜದ ವತಿಯಿಂದ ಪ ಪೂ ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರ ನಂದಿ ಮುನಿ ಮಹಾರಾಜರ ಸಾನಿಧ್ಯದಲ್ಲಿ ಆಯೋಜಿಸಲಾದ ಬೃಹತ್ ಸಮಾವೇಶದಲ್ಲಿ ಚಿಕ್ಕೋಡಿ ಸದಲಗಾ ಕ್ಷೇತ್ರದ ಶಾಸಕರಾದ ಶ್ರೀ ಗಣೇಶಹುಕ್ಕೇರಿ ಅವರು ಪಾಲ್ಗೊಂಡು, ಮಾತನಾಡಿ ಸಮಾಜದ ಹಿತಾಸಕ್ತಿಗಾಗಿ ಪ್ರಸ್ತಾಪಿಸಲಾದ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಈ ಮಹಾಸಮಾವೇಶದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ ಅವರು ಪಾಲ್ಗೊಂಡು, ಜೈನ ಸಮಾಜದ ಮುಖಂಡರು, ಧರ್ಮಗುರುಗಳು ಮತ್ತು ಭಕ್ತರಿಂದ ಪ್ರಸ್ತಾಪಿಸಲಾದ ಹಲವು ಪ್ರಮುಖ ವಿಚಾರಗಳನ್ನು ಆಲಿಸಿದರು.

ಈ ಸಂದರ್ಭ ಜೈನ ಸಮಾಜದ ಧರ್ಮಗುರು ನಂದಿಮುನಿ ಮಹಾರಾಜರು, ಭಟ್ಟರಕ್ಕ ಸ್ವಾಮೀಜಿಗಳು ಸೇರಿದಂತೆ ದೇಶದ ವಿವಿಧ ಜೈನ ಮಠಗಳ ಗುರುಗಳು ಉಪಸ್ಥಿತರಿದ್ದರು.

ಜೈನ ಸಮಾಜದ ಪ್ರಮುಖ ಬೇಡಿಕೆಗಳಲ್ಲಿ – ಸಮಾಜಕ್ಕೆ ಸ್ವತಂತ್ರ ನಿಗಮ ಸ್ಥಾಪನೆ, ಬಡ ವಿದ್ಯಾರ್ಥಿಗಳಿಗೆ ಶಿಶುವೇತನ ಮಂಜೂರು ಮತ್ತು ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯಗಳನ್ನು ಸರಿಪಡಿಸುವುದು ಎಂಬುವು ಪ್ರಮುಖವಾಗಿವೆ. ಈ ಎಲ್ಲಾ ಬೇಡಿಕೆಗಳನ್ನು ರಾಜ್ಯಪಾಲರ ಮುಂದೆ ಪ್ರಸ್ತಾಪಿಸಲಾಯಿತು.

ಸಮಾಜದ ಉನ್ನತಿಗಾಗಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಆಶಿಸುತ್ತೇವೆ. ಜೈನ ಧರ್ಮದ ಶಾಂತಿ, ಸೌಹಾರ್ದತೆ ಮತ್ತು ನೀತಿಯ ಮೌಲ್ಯಗಳನ್ನು ಎಲ್ಲರಿಗೂ ತಲುಪಿಸಲು ಈ ಸಮಾವೇಶವು ಒಂದು ಆದರ್ಶ ವೇದಿಕೆಯಾಗಿದ್ದು, ಸಮಾಜದ ಬಾಳಿಗೆ ಹೊಸ ಬೆಳಕು ಹರಡಲಿದೆ ಎಂಬ ನಂಬಿಕೆ ಇದೆ.

ವರದಿ :ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!