
ಘಟಪ್ರಭಾ: ಗಣೇಶ ಚತುರ್ಥಿ ಉತ್ಸವ ಮತ್ತು ಈದ್ ಮಿಲಾದ ಹಬ್ಬಗಳನ್ನು ಭಕ್ತಿ ಹಾಗೂ ಶಾಂತಿ ಯುತವಾಗಿ ಆಚರಣೆ ಮಾಡಬೇಕೆಂದು ಘಟಪ್ರಭಾ ಪೋಲಿಸ್ ಠಾಣೆಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಚ್ ಡಿ ಮುಲ್ಲಾ ಅವರು ನೀಡಿದ್ದಾರೆ
ಅವರು ಘಟಪ್ರಭಾ ಠಾಣೆಯಲ್ಲಿ ಮುಂಬರುವ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳ ನಿಮಿತ್ತವಾಗಿ ಏರ್ಪಡಿಸಿದ್ದ ಪೂರ್ವಭಾವಿ ಠಾಣೆಯ ಪಿಐ ಎಚ್ ಡಿ ಮುಲ್ಲಾ ಅವರು ಸಭೆಯಲ್ಲಿ ಗಣೇಶೋತ್ಸವ ಆಚರಣೆ ವೇಳೆ ಎದುರಾಗಬಹುದಾದ ಸಮಸ್ಯೆಗಳು, ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.
ಗಣೇಶ ಮೂರ್ತಿ ಕೂಡಿಸುವವರು ಪೆಂಡಾಲ್ ಹಾಕುವ ಮುಂಚೆ ಸ್ಥಳದ ಮಾಲೀಕರು ಹಾಗೂ ಪುರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಗಣೇಶ ಪ್ರತಿಷ್ಠಾಪನೆ ಬಗ್ಗೆ ಸಮಿತಿ ಮುಖಂಡರು ಠಾಣೆಗೆ ಅರ್ಜಿ ನೀಡಿ ಅನುಮತಿ ಪಡೆಯಬೇಕು ವಿದ್ಯುತ್ ಸಂಪರ್ಕಕ್ಕೆ ಹೆಸ್ಕಾಂ ಕಚೇರಿಗಳಿಂದ ಸೂಕ್ತ ಅನುಮತಿ ಪಡೆಯುವುದು ಕಡ್ಡಾಯ. ಯಾವುದೇ ರೀತಿಯ ಗಲಭೆಗಳಿಗೆ ಅಸ್ಪದ ನೀಡಬಾರದು. ಆಯೋಜಕರು ಗಣೇಶ ವಿಸರ್ಜನೆ ವೇಳೆ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿರಬೇಕು.ಗಣೇಶ ವಿಸರ್ಜನೆ ವೇಳೆಯಲ್ಲಿ ಡಿಜೆ ಸೌಂಡ್ ಹಚ್ಚಲಿಕ್ಕೆ ಅವಕಾಶ ಇಲ್ಲ ಗಣೇಶ ಆಡಳಿತ ಮಂಡಳಿಯವರು ಕಾನೂನು ಸುವ್ಯವಸ್ಥೆ ಕಾಪಾಡಬೇಕು ನಮ್ಮ ಇಲಾಖೆಯಿಂದ ತಮಗೆ ಸದಾಕಾಲ ಸಹಕಾರ ಇರುತ್ತದೆ ಒಂದು ವೇಳೆ ಪಾಲಿಸದಿದ್ದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ಹೇಳಿದರು.
ಹಬ್ಬದ ಪ್ರಯುಕ್ತ ಸಂಸ್ಕೃತಿಕ,ಧಾರ್ಮಿಕ, ಮನೋರಂಜನೆ ಕಾರ್ಯಕ್ರಮಗಳು, ನಾಟ್ಯ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಗಮನವನ್ನು ಹರಿಸಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಾದ ಗಣಪತಿ ವಿಗ್ರಹಕ್ಕಿಂತ ಮಣ್ಣಿನಿಂದ ತಯಾರಿಸಿದ ವಿಗ್ರಹಕ್ಕೆ ಪೂಜೆ ಸಲ್ಲಿಸಿದರೆ ಪರಿಸರ ಸಂರಕ್ಷಣೆ ಜತೆಗೆ ಸಾಂಪ್ರದಾಯಿಕ ವೌಲ್ಯವನ್ನು ಉಳಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಘಟಪ್ರಭಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಪೋಲಿಸರು ಎಂದರೆ ನಮ್ಮ ಸಹೋದರರಿದ್ದಂತೆ ಅವರಿಗೆ ಸಮಸ್ತ ಘಟಪ್ರಭಾದ ಜನತೆ ಸಹಕಾರ ಯಾವತ್ತೂ ನೀಡುತ್ತಾ ಬಂದಿದೆ ಮುಂದೆಯೂ ಸಹಕಾರ ನೀಡುತ್ತದೆ ಎಂದರು.
ಹಿರಿಯ ಪತ್ರಕರ್ತ, ಮುಖಂಡರಾದ ಗಣುಸಿಂಗ ರಜಪೂತ ಮಾತನಾಡಿ, ಪೋಲಿಸರು ನೀಡುವ ಸೂಚನೆಗಳು ನಮ್ಮ ಹಿತಕ್ಕಾಗಿಯೇ ಇರುತ್ತವೆ ಅವನ್ನು ನಾವು ಪಾಲಿಸೋಣ ಪೋಲಿಸರು ಸಹ ಜನತೆಯ ಕೊರತೆಗಳಿಗೆ ಆದಷ್ಟು ಬೇಗ ಸ್ಪಂದಿಸುವ ಕೆಲಸ ಮಾಡಲಿ ಎಂದರು.
ಕರವೇ ರಾಜ್ಯಾಧ್ಯಕ್ಷ ಕೆಂಪಣ್ಣಾ ಚೌಕಾಶಿ ಮುಂತಾದವರು ಮಾತನಾಡಿ ಡಿಜೆ ಸೌಂಡ ಹಚ್ಚುವುದರಿಂದ ಸಾರ್ವಜನಿಕರಿಗೆ ಹಾಗೂ ಚಿಕ್ಕ ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚು ಇರುತ್ತದೆ. ಅನಾವಶ್ಯಕವಾಗಿ ಅಹಿತಕರ ಘಟನೆಗಳಿಗೆ ಕಾರಣವಾಗುತ್ತೆ ಆದ್ದರಿಂದ ಗಣೇಶ ಹಬ್ಬದ ನಿಮಿತ್ತದಲ್ಲಿ ಡಿಜೆ ಸೌಂಡ ಬಳಸಿ ದುಂದುವೆಚ್ಚ ಕರ್ಚು ಮಾಡುವುದಕ್ಕಿಂತ ಅದೇ ದುಡ್ಡಲ್ಲಿ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು,ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವುದು,ಅನೇಕ ಬಡ ಕಲಾವಿದರನ್ನು ವೇದಿಕೆ ಮುಖಾಂತರ ಬೆಳಕಿಗೆ ತರಬಹುದು ಎಂದು ಹೇಳಿದರು. ಸಿಬ್ಬಂದಿ ಗಳಾದ ಬಿ ಎಸ್ ನಾಯಿಕ, ರಾಜು ಧುಮಾಳೆ, ದೇಸಾಯಿ, ಆನಂದ ಗೌಡರ ಮುಂತಾದವರು ಕಾರ್ಯಕ್ರಮ ವ್ಯವಸ್ಥೆ ಮಾಡಲು ಶ್ರಮ ವಹಿಸಿ ದರು.
ಈ ಸಂದರ್ಭದಲ್ಲಿ ಕುಮಾರ್ ಹುಕ್ಕೇರಿ ಕಾಡಪ್ಪಾ ಕರೋಶಿ, ಶಾಂತು ಕಟ್ಟೀಮನಿ ಕೆಂಪಯ್ಯಾ ಪುರಾಣಿಕ ರೆಹಮಾನ್ ಮೊಕಾಶಿ ಬರಮಣ್ಣಾ ಗಾಡಿವಡ್ಡರ ಪ್ರಶಾಂತ್ ಅರಳಿಕಟ್ಟಿ ನಿತಿನ್ ದೇಶಪಾಂಡೆ, ಪತ್ರಕರ್ತರಾದ ಗಣೇಶ ಗಾಣಿಗ, ಅಪ್ಪಾಸಾಬ ಮುಲ್ಲಾ ಸೇರಿದಂತೆ ಊರಿನ ಹಿರಿಯ ಮುಖಂಡರು,ಪತ್ರಕರ್ತರು ವಿವಿಧ ಸಂಘಟನೆಗಳ ಮುಖಂಡರು,ಘಟಪ್ರಭಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಂಗನಕೇರಿ, ಹುಣಶ್ಯಾಳ ಪಿ ಜಿ, ಲೋಳಸೂರ, ಬಸಳಿಗುಂದಿ ಅರಭಾವಿ, ಸಿಂಧಿ ಕುರಬೇಟ, ದುಪದಾಳ ಮಲ್ಲಾಪುರ ಪಿ ಜಿ, ರಾಜಾಪುರ ,ಬಳೋಬಾಳ ಪಾಮಲದಿನ್ನಿ,ಬಡಿಗವಾಡ, ನಂದಗಾಂವ, ಮುತ್ನಾಳ ಖಾನಾಪೂರ, ಸಾವಳಗಿ ಸೇರಿದಂತೆ ನಾನಾ ಗ್ರಾಮಗಳಿಂದ ಆಗಮಿಸಿದ್ದ ಮುಖಂಡರು ಹಾಗೂ ಗಣೇಶೋತ್ಸವ ಆಚರಣಾ ಸಮಿತಿ ಸದಸ್ಯರು ,ಪೋಲಿಸ್ ಸಬ್ಬಂದಿ ವರ್ಗದವರು,ಹಾಗೂ ಇನ್ನೂ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ವರದಿ ಶ್ರೀಕಾಂತ ವಿ ಮಹಾಜನ ಸಾಮಾಜಿಕ ಕಾರ್ಯಕರ್ತರು ಘಟಪ್ರಭಾ ಮತ್ತು ಗೋಕಾಕ.
ವರದಿ: ಶಿವಾಜಿ ಎನ್ ಬಾಲೇಶಗೋಳ




