ಸಿಂಧನೂರು: 21 ಆಗಸ್ಟ್ 2025 ರಂದು ಸಾಯಂಕಾಲ 4 ಗಂಟೆಗೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ರಾಯಚೂರು ಹಾಗೂ ಮಾನ್ಯ ಪೊಲೀಸ್ ಉಪಾಧಿಕ್ಷಕರು ಸಿಂಧನೂರು ರವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಸಿಂಧನೂರು ನಗರದ ಗಣೇಶ್ ಪ್ರತಿಷ್ಠಾಪನ ಮಂಡಳಿಯವರ ಈದ್ಗಾ ಕಮಿಟಿಯವರು ಇತರೆ ಸಂಘ ಸಂಸ್ಥೆ ಯವರ ಒಳಗೊಂಡ ಶಾಂತಿ ಸಭೆಯನ್ನು ನಗರದ ಟೌನ್ ಹಾಲಿನಲ್ಲಿ ಸಭೆ ಏರ್ಪಡಿಸಲಾಯಿತು.
ನಂತರ ಅವರು ಸೌಹಾರ್ದತ ಸಭೆಯಲ್ಲಿ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಈ ದೇಶದಲ್ಲಿ ಹಬ್ಬಗಳ ಸಂಭ್ರಮ ಆಚರಣೆ ಮಾಡಬೇಕು ಆದರೆ ಆ ಸಡಗರ ನಮಗೆ ಶೋಕ ಚರಣೆಯಾಗಬಾರದು ಆದ್ದರಿಂದ ಹಿಂದೂ ಮುಸ್ಲಿಂ ಸಮುದಾಯದ ಜನತೆ ಯಾವುದೇ ರೀತಿಯ ಕೋಮು ಗಲಭೆ ಶಾಂತಿ ಕದಡುವ ಕೆಲಸ ಮಾಡದಂತೆ ವ್ಯವಸ್ಥಿತವಾಗಿ ಆಚರಣೆ ಮಾಡಬೇಕು ಕೋಮುಗಳ ಶಾಂತಿ ಕದಡುವಂತವರನ್ನು ಭಾವನೆಗಳಿಗೆ ದಕ್ಕೆ ಹಾಗೂ ಮದ್ಯ ಮಾದಕ ವಸ್ತುಗಳ ಬಳಕೆ ಮಾರಾಟ ಕುರಿತು ಮಾಹಿತಿ ಇದ್ದಲ್ಲಿ ಮಾಹಿತಿ ನೀಡಿದಲ್ಲಿ ನಿರ್ಧಾಕ್ಷಿಣವಾಗಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಹಬ್ಬ ಆಚರಣೆ ಮತ್ತು ವಿಸರ್ಜನೆ ವೇಳೆ ಪೊಲೀಸ್ ಇಲಾಖೆ ನಿಮಗೆ ರಕ್ಷಣೆ ನೀಡಲು ಹಗಲಿರಳು ಶ್ರಮಿಸುತ್ತದೆ ಈ ಬಾರಿ ಹಬ್ಬ ಆಚರಣೆ ವಿಸರ್ಜನೆಗೆ ಡಿಜೆ ಗಳಿಗೆ ಅನುಮತಿ ನಿಷೇಧಿಸಲಾಗಿದೆ ಇದರಿಂದ ಶಬ್ದ ಮಾಲಿನ್ಯ ಉಂಟಾಗುವುದಲ್ಲದೆ, ಹಲವು ಘಟನೆಗಳಿಗೆ ಎಡೆಮಾಡಿ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳು, ಮಾನ್ಯ ಪೊಲೀಸ್ ಉಪಾದಿಕ್ಷಕರು, ತಾಲೂಕ ದಂಡಾಧಿಕಾರಿಗಳು. ಸಿಪಿಐ. ಪಿ ಐ. ಪಿಎಸ್ಐಗಳು ಗಣೇಶ್ ಪ್ರತಿಷ್ಠಾನ ಮಂಡಳಿಯವರು, ಈದ್ಗ ಕಮಿಟಿಯವರು, ಹಾಗೂ ಮುಖಂಡರಾದ ಕೆ. ಕರಿಯಪ್ಪ. ಬಸವರಾಜ ನಾಡಗೌಡ. ಬಾಬುಗೌಡ. ಸೋಮನಗೌಡ. ಹುಸೇನ್ ಸಾಬ್. ಬಾಬರ್ ಪಾಷಾ.ಹಾರುನ್ ಪಾಷಾ. ನದೀ ಮುಲ್ಲಾ. ಎಚ್ ಎನ್. ಬಡಿಗೇರ್. ಲಕ್ಷ್ಮಣ ಭೋವಿ. ಸಿದ್ರಾಮೇಶ್. ಕೆ.ರಾಜಶೇಖರ. ವೀರೇಶ್ ಹಟ್ಟಿ. ಅಯ್ಯನಗೌಡ ವೈದ್ಯಾಧಿಕಾರಿಗಳು. ಸಾರ್ವಜನಿಕರು ಭಾಗವಹಿಸಿದ್ದರು.
ವರದಿ: ಬಸವರಾಜ ಬುಕ್ಕನಹಟ್ಟಿ




