Ad imageAd image

ಗಜಮುಖ ಗೆಳೆಯರ ಬಳಗದ ವತಿಯಿಂದ ಗಣೇಶ ಉತ್ಸವ

Bharath Vaibhav
ಗಜಮುಖ ಗೆಳೆಯರ ಬಳಗದ ವತಿಯಿಂದ ಗಣೇಶ ಉತ್ಸವ
WhatsApp Group Join Now
Telegram Group Join Now

ಬೆಂಗಳೂರು :ಯಶವಂತಪುರ ವಿಧಾನ ಸಭಾ ಕ್ಷೇತ್ರದ ತಿಗಳರಪಾಳ್ಯದ ಗಜಮುಖ ಗೆಳೆಯರ ಬಳಗದ ವತಿಯಿಂದ ಗಣೇಶ ಉತ್ಸವ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮತ್ತು ಮನೋರಂಜನೆ ಅಂದರೆ (ಆರ್ಕೆಸಟ್) ಆಯೋಜಿಸಲಾಗಿತ್ತು.

ಸುಂದರವಾದ ಗಣೇಶ ವಿಗ್ರಹವನ್ನು ಸ್ಥಾಪಿಸಿ ವಿವಿಧ ಹೂವುಗಳಿಂದ ಅಲಂಕಾರಿ ಶಾಸ್ತ್ರೋಕ್ತವಾಗಿ ಪೂಜಾ ಪುನಸ್ಕಾರ ಮಹಾಮಂಗಳಾರತಿ ಜರುಗಿದವು. ತಿಗಳರಪಾಳ್ಯದ ಗಜಮುಖ ಗೆಳೆಯರ ಬಳಗದ ಮುಖಂಡರಾದ ಕೀರ್ತಿ, ಭಾರತ್, ದರ್ಶನ್, ಪ್ರೀತಮ್, ಮಲ್ಲಿ, ಅಜಯ್, ಪುನೀತ್, ವೆಂಕಿ, ಭೀಮ, ಅಭಿ, ಬಾಬು, ಇಶಾಂತ್ ಇವರೆಲ್ಲ ನೇತೃತ್ವದಲ್ಲಿ ಗಣೇಶೋತ್ಸವ ಆಯೋಜಿಸಲಾಗಿದ.

ಈ ಕಾರ್ಯಕ್ರಮದಲ್ಲಿ ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಯುವ ಮುಖಂಡ ಹಾಗೂ ಗ್ರೆಟರ್ ಬೆಂಗಳೂರು ಪ್ರಭಾವಿ ಆಕಾಂಕ್ಷಿ ಅಭ್ಯರ್ಥಿ ವಿ. ನಾಗರಾಜ್ ಅಂದ್ರಹಳ್ಳಿ ಪಾಲ್ಗೊಂಡು ಗಣೇಶನ ದರ್ಶನ ಪಡೆದರು ನಂತರ ಅವರು ಮಾತನಾಡಿ ತಿಗಳರಪಾಳ್ಯದ ಗಜಮುಖ ಗೆಳೆಯರ ಬಳಗದ ಯುವಕರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಗಾದೆ ಮಾತು ಇದೆ ಅದರಂತೆ ಹುಡುಗರು ಚಿಕ್ಕವರಾಗಿದ್ದರು ಅವರೆಲ್ಲರು ದೊಡ್ಡ ಪ್ರಮಾಣದಲ್ಲಿ ಗಣೇಶ ಉತ್ಸವ ಮಾಡಿ ಬುದ್ದಿವಂತರಿಗೆ, ರಾಜಕಾರಣಿಗಳಿಗೆ, ಉದ್ಯಮಿಗಳಿಗೆ ಮತ್ತು ಸಮಾಜ ಸೇವಕರಿಗೆ ಆವ್ಹಾನಿಸಿ ಪ್ರತಿಯೋಬ್ಬರಿಗೂ ಗೌರವಿಸಿದ್ದು ಬಹಳ ಸಂತೋಷ ತಂದಿದೆ ನನ್ನ ಸಹಕಾರ ಪ್ರೋತ್ಸಾಹ ಸದಾ ನಿಮ್ಮ ಗಜಮುಖ ಗೆಳೆಯರ ಬಳಗಕ್ಕೆ ಸದಾ ಇರುತ್ತದೆ ಎಂದು ಯುವ ನಾಯಕ ವಿ. ನಾಗರಾಜ್ ಅಂದ್ರಹಳ್ಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ದೊಡ್ಡಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಲಿಖಿತ್ ಗೌಡ್ರು ಮಾತನಾಡಿ ಗಣೇಶನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ದೇವತೆ, ಹಾಗೆಯೇ ವಿಘ್ನಗಳನ್ನು ನಿವಾರಿಸುವವನು ಎಂಬ ನಂಬಿಕೆಯಾಗಿದೆ ನಮ್ಮೇಲ್ಲರಲ್ಲಿ ಇದೆ ಹಿಂದೂ ಸಮುದಾಯವನ್ನು ಒಗ್ಗೂಡಿಸುತ್ತದೆ, ಸಂಸ್ಕೃತಿ ಈಗಿನ ಪೀಳಿಗೆಗೆ ತಿಳಿಸಿದ ಹಾಗೆ ಆಗುತ್ತದೆ ಎಂದು ಲಿಖಿತ್ ಗೌಡ್ರು ಯುವಕರಿಗೆ ಮಾರ್ಗದರ್ಶನ ನೀಡಿದರು. ಕುಮಾರ್ ಎಸ್ ಜಿ ತಿಗಳರಪಾಳ್ಯ ಸರ್ವರಿಗೂ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಮುಖಂಡ ಕೇಶವ ಮೂರ್ತಿ, ಮಲ್ಲೇಶ್ ಅಂದ್ರಹಳ್ಳಿ, ಕೀರ್ತಿ ಗೌಡ ಸೇರಿದಂತೆ ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!