—————————————————————ನಾಗರಿಕರಿಗೆ ಸಿ ಪಿ ಐ ವಸಂತ್ ವಿ ಅಸೋದೆ ಸಲಹೆ
ಮೊಳಕಾಲ್ಮುರು: ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸುವಸ್ತೆಯಿಂದ ಆಚರಿಸಬೇಕು ಎಂದು ವೃತ್ತಿ ನಿರೀಕ್ಷಕರಾದ ವಸಂತ ವಿ ಅಸೋದೆ ತಿಳಿಸಿದರು.
ಮೊಳಕಾಲ್ಮೂರು ಪೊಲೀಸ್ ಠಾಣೆ ಹವರಣದಲ್ಲಿ ಗೌರಿ ಗಣೇಶ ಹಬ್ಬದ ವೇಳೆ ಯಾವುದೇ ಹರಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕಮ ಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಮಣ್ಣಿನ ಗಣಪತಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು ವಿಸರ್ಜನೆ ವೇಳೆ ಸಾರ್ವಜನಿಕರು ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು, ಸಂಘಟಕರು ಸಾರ್ವಜನಿಕರ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಕೂರಿಸುವ ಮೊದಲೇ ಸಂಬಂಧಪಟ್ಟ ಪಂಚಾಯಿತಿ ಗ್ರಾಮ ಪಂಚಾಯಿತಿ ಪೊಲೀಸ್ ಇಲಾಖೆ ಬೆಸ್ಕಾಂ ಅಗ್ನಿಶಾಮಕ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪತ್ರ ಪಡೆಯಬೇಕು ಎಂದರು.
ಸಾರ್ವಜನಿಕ ರಸ್ತೆ ಮತ್ತುವಾಹನ ಓಡಾಡುವ ಸ್ಥಳದಲ್ಲಿ ಶಾಮಿಯಾನ ಹಾಕಿ ಗಣೇಶ ಮೂರ್ತಿಯನ್ನು ಕೂರಿಸುವ ಹಾಗೆ ಇಲ್ಲ. ತಾತ್ಕಾಲಿಕ ವಿದ್ಯುತ್ ಸರಬರಾಜಿಗೆ ಬೆಸ್ಕಾಂ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು, ಧ್ವನಿವರ್ಧಕ ಡಿಜೆ ಬಳಕೆ ಮಾಡುವಂತಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಆಯುಜಕರು ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಸಬ್ಮಿನ್ಸ್ಪೆಕ್ಟರ್ ಮಹೇಶ್ ಲಕ್ಷ್ಮಣ್, ಹೊಸಪೇಟೆ ಮಾತನಾಡಿ, ನಾಗರಿಕರ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸಬೇಕು, ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು, ಸಣ್ಣಪುಟ್ಟ ಆಯಿತಕರ ಘಟನೆ ದಿನದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಗಣೇಶ ತೋರಿಸುವ ಎಲ್ಲರೂ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್, ಸದಸ್ಯರುಗಳಾದ ನಾಗಭೂಷಣ್, ಪರಮೇಶಿ ಹೆಜ್ಜೆನಳ್ಳಿ ನಾಗರಾಜ್, ಅಬ್ದುಲ್ಲ ಇವರು ಮುಂಜಾಗ್ರತೆ ಕ್ರಮ ಬಗ್ಗೆ ತಮ್ಮ ಅನಿಸಿಕೆಗೆ ತಿಳಿಸಿದರು. ಗಣಪತಿ ಸೇವಾ ಸಮಿತಿಯ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ಸದಸ್ಯರುಗಳು ಮುಖಂಡರುಗಳು ಯುವಕರು ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ




