ಚಿಕ್ಕೋಡಿ : ಎಕ್ಸಂಬಾ ಚೆನ್ನಬಸಪ್ಪ ಕರಾಳೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ದತ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀ ಗಣೇಶ ಹುಕ್ಕೇರಿ ಭಾಗಿ.

ಶ್ರೀ ಚನ್ನಬಸಪ್ಪ ಕರಾಳೆ ಜನತಾ ಶಿಕ್ಷಣ ಮಹಾವಿದ್ಯಾಲಯ, ಯಕ್ಸಂಬಾ ಇಲ್ಲಿ ನಡೆದ ಲಿಂ. ಚನ್ನಬಸಪ್ಪ ಕರಾಳೆ ದತ್ತಿ ಉದ್ಘಾಟನೆ ಹಾಗೂ “ಚನ್ನಬಸಪ್ಪ ಕರಾಳೆ” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಾಸಕರಾದ ಶ್ರೀ ಗಣೇಶ ಅಣ್ಣಾ ಹುಕ್ಕೇರಿ ಅವರು ಭಾಗವಹಿಸಿ, ಲಿಂ. ಚನ್ನಬಸಪ್ಪ ಕರಾಳೆ ಅವರ ಸಮರ್ಪಿತ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು.
ಈ ರೀತಿಯ ಸಮಾರಂಭಗಳು ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ವರದಿ : ರಾಜು ಮುಂಡೆ




