ನಿಪ್ಪಾಣಿ: ತಾಲೂಕಿನ ಬೇಡಕಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿರುವ ಶ್ರೀ ಸಿದ್ಧಿವಿನಾಯಕ ಗಣೇಶ ಮಂದಿರದಲ್ಲಿ ಶನಿವಾರ ಬೆಳಿಗ್ಗೆ ಗಣೇಶ ಜಯಂತಿ ಪ್ರಯುಕ್ತ ಗಣೇಶನಿಗೆ ಅತ್ಯಂತ ಉತ್ಸಾಹ ಹಾಗೂ ಭಕ್ತಿ ಭಾವೈಕ್ಯತೆಯಿಂದ ಗಣೇಶ ಜಯಂತಿ ಆಚರಿಸಲಾಯಿತು. ಬೆಳಿಗ್ಗೆ ರಾಮಚಂದ್ರ ಗುರವ ಹಾಗೂ ರವಿ ಗುರವ ಅವರಿಂದ ಗಣೇಶ ಸ್ತೋತ್ರ ಪಠಣ ಅಭಿಷೇಕ ಮಹಾಪೂಜೆ ಮಾಡಲಾಯಿತು. ತದನಂತರ ಉಪಸ್ಥಿತರಿದ್ದ ಮುತ್ತೈದೆಯರಿಂದ ಗಣೇಶ ತೊಟ್ಟಿಲಿಗೆ ಪುಷ್ಪಾಲಂಕಾರ ಮಾಡಿ ಗಣೇಶನಿಗೆ ನಾಮಕರಣ ಮಾಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಿಳೆ ಹಾಗೂ ಪುರುಷ ಭಕ್ತರಿಗೆ ಗುಗ್ಗರಿ ಹಾಗೂ ಬೆಲ್ಲ ಶುಂಠಿ ಹಂಚಲಾಯಿತು ಮುತ್ತೈದೆಯರಿಂದ ತೊಟ್ಟಿಲು ಗೀತೆಗಳೊಂದಿಗೆ ಸಿದ್ಧಿವಿನಾಯಕ ಗಣೇಶನಿಗೆ ಜೈ ಜೈ ವಾಗಲೆಂದು ಘೋಷಣೆ ಕೂಗಿ ಪುಷ್ಪವೃಷ್ಟಿ ಮಾಡಲಾಯಿತು ತದನಂತರ ಮಹಾಪೂಜೆಯ ಬಳಿಕ ಉಪಸ್ಥಿತರಿದ್ದ ಸದ್ಭಕ್ತರಿಗೆ ಮಹಾಪ್ರಸಾದ ಹಂಚಲಾಯಿತು. ಸಾವಿರಾರು ಭಕ್ತರು ಇದರ ಲಾಭ ಪಡೆದುಕೊಂಡರು ಗಣೇಶ ಜಯಂತಿ ಉತ್ಸವದಲ್ಲಿ ಉತ್ಸವ ಕಮಿಟಿಯ ಸದಸ್ಯರಾದ ಪ್ರಕಾಶ ತಾರದಾಳೆ ಬಾಳಸಾಹೇಬ ಶಿಂದೆ ಅನಗೌಡ ಪಾಟೀಲ ರವಿ ದೇಸಾಯಿ ಗಜಾನನ್ ಪಾಟೀಲ ರಾಮಾ ಗುರವ ಜಾಲಿಂದರ ಖರಾತ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ವರದಿ:ಮಹಾವೀರ ಚಿಂಚಣೆ




