ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಪಟ್ಟಣ ಮತ್ತು ಕ್ಯಾಂಪ ಏರಿಯಾದಲ್ಲಿ ವಿವಿಧ ರೀತಿಯ ಅಂದ ಚಂದದ ಅದ್ಭುತವಾದ ಗಣೇಶ ಮೂರ್ತಿಯನ್ನು ಪ್ರತಿಸ್ಥಾಪಿಸುವ ಮೂಲಕ ಗಣೇಶನ ಹಬ್ಬಕ್ಕೆ ಚಿನ್ನದ ನಾಡು ಹಟ್ಟಿ ಪಟ್ಟಣ ಸಾಕ್ಷಿಯಾಗಿತ್ತು
ಇಂದು ಬೆಳಗ್ಗೆಯಿಂದ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸುವ, ಹಟ್ಟಿ ಪಟ್ಟಣದ ಜನ ಮತ್ತು ಭಕ್ತಾದಿಗಳು ಗಣೇಶನ ಹಬ್ಬದ ಸಂಭ್ರಮದಲ್ಲಿ ತೊಡಗಿದರು ವಿಘ್ನ ವಿನಾಯಕ ಮೂಷಿಕ ವಾಹನ ಗಣೇಶನನ್ನು ಇಂದಿನಿಂದ ಮೂರು ದಿನ ಮತ್ತು 5, 7,9 ನಂತರ 11 ದಿನ ರವರಿಗೆ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ,ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ಪ್ರಸಾದದ ವ್ಯವಸ್ಥೆಯು ಮಾಡಿರುತ್ತಾರೆ.
ತದನಂತರ ವಿಸರ್ಜನೆ ದಿನದಂದು ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ವಿಸರ್ಜನೆ ಮಾಡುತ್ತಾರೆ,ಈ ಗಣೇಶ್ ಚತುರ್ಥಿ ಗಣೇಶನ ಮೂರ್ತಿ ಈ ಇಂದಿನ ಕಾಲದಿಂದಲೂ ಆಚರಿಸಿಕೊಂಡು ಬರುವ ಸಂಪ್ರದಾಯವಾಗಿದೆ,
ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟಿಷರ ವಿರುದ್ಧ, ದೇಶದ ಜನರನ್ನ ಒಗ್ಗಿಡಿಸಲು, & ದೇಶದ ಏಕತೆಯನ್ನ ಬಲಪಡಿಸಲು, ಸ್ವತಂತ್ರ ಹೋರಾಟಗಾರರಾದ ಲೋಕಮಾನ್ಯ ತಿಲಕ್ ರವರು ಗಣೇಶ್ ಚತುರ್ಥಿಯನ್ನ ಸರ್ವ ಧರ್ಮದ & ಜನಾಂಗದ ಜನರನ್ನ ಸೇರಿಸಲು ಆಚರಿಸಲ್ಪಟ್ಟ ಗಣೇಶ್ ಹಬ್ಬವು ಇಂದು ವಿವಿಧ ವೈಭವಕತೆಯಿಂದ ಸಂಭ್ರಮದ ಹೊನಲಿನಲ್ಲಿ ಆಚರಣೆಯಲ್ಲಿದೆ.
ಈ ಗಣೇಶ್ ಹಬ್ಬವು ತಮಗೆಲ್ಲಾ ಸುಖ, ಶಾಂತಿ, ಪರಸ್ಪರ ಬಾಂಧವ್ಯ ಬೆಳೆಯಲಿ, ಸರ್ವರಿಗೂ ಗಣೇಶ್ ಚತುರ್ಥಿಯ ಶುಭಾಶಯಗಳು ಶ್ರೀನಿವಾಸ್ ಮಧುಶ್ರೀ ಹಟ್ಟಿ ಚಿನ್ನದ ಗಣಿ
ವರದಿ : ಶ್ರೀನಿವಾಸ ಮಧುಶ್ರೀ




