Ad imageAd image

ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಗಣೇಶನ ಅದ್ದೂರಿ ಸ್ವಾಗತ

Bharath Vaibhav
ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಗಣೇಶನ ಅದ್ದೂರಿ ಸ್ವಾಗತ
WhatsApp Group Join Now
Telegram Group Join Now

ಇಳಕಲ್ : ಸಮೀಪದ ಗೊರಬಾಳ ಸಿದ್ದಿ ವಿನಾಯಕ ಗೆಳೆಯರ ಬಳಗದ ಯುವಕರು ಮಾಡಿದ್ದ
ನಮ್ಮ ಓಣೆಯ ಗಣಪತಿ ಚಂದ ಡಿಜೆ ಹಚ್ಚಿ ಮೆರಿಸೋಣ ಮುಂದ. ಎಲ್ಲಾರು ಒಂದೇ ಕಲರ್ ಅಂಗಿ ತಂದ. ಎಂಬ ಸಾಂಗ್ ಮೂಲಕ ರಾಜ್ಯದ್ಯಂತ ವೈರಲ್ ಆಗಿದ್ದ ಗೊರಬಾಳದ ಸಿದ್ಧಿ ವಿನಾಯಕ ಗೆಳೆಯರ ಬಳಗದ ಯುವಕರು ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಗಣೇಶನನ್ನು ಅದ್ದೂರಿ ಸ್ವಾಗತಿಸಿದರು.

ನಂತರ ಅದೇ ಜೆಸಿಬಿ ಮೂಲಕ ವಿವೇಕಾನಂದ ತರುಣ ಸಂಘದ ಯುವಕರು ಪುಷ್ಪಾರ್ಚನೆ ಮಾಡಿ ಗಣೇಶನನ್ನು ಗ್ರಾಮಕ್ಕೆ ಬರಮಾಡಿಕೊಂಡರು.ಗೊರಬಾಳ ಗ್ರಾಮದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರಿಗೆ ಯುವಕರು ತಂಡೋಪ ತಂಡವಾಗಿ ಇಲಕಲ್ ಹಾಗೂ ಮತ್ತು ಸಾಧುರ ತೋಟದಿಂದ ಕಳಸ ಡೊಳ್ಳು ಮಜಲು ಟ್ಯಾಕ್ಟರ್ ಸಾಂಗುಗಳೊಂದಿಗೆ ಅದ್ದೂರಿಯಾಗಿ ಡ್ಯಾನ್ಸ್ ಮಾಡುತ್ತಾ ಗಣೇಶನನ್ನು ವಿವಿಧ ಮೆರವಣಿಗೆಗಳ ಮೂಲಕ ಗೊರಬಾಳದವರೆಗೆ ಬರಮಾಡಿಕೊಂಡು ಗಣೇಶನು ಊರನ್ನು ಪ್ರವೇಶಿಸುತ್ತಿದ್ದಂತೆಯೇ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ವಿಭಿನ್ನ ಶೈಲಿಯಲ್ಲಿ ಗಣೇಶನನ್ನು ಬರಮಾಡಿಕೊಂಡಿದ್ದ ಯುವಕರ ಖುಷಿ ಮುಗಿಲು ಮುಟ್ಟಿತ್ತು ನಂತರ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಾ ಕೈಕಾಂರ್ಯಗಳಲ್ಲಿ ಪಾಲ್ಗೊಂಡು ಗಣೇಶನನ್ನು ಅದ್ದೂರಿ ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಬರಮಾಡಿಕೊಂಡಿದ್ದು ಗ್ರಾಮದ ಜನ ನೋಡಿ ಕಣ್ತುಂಬಿ ಕೊಂಡರು.

ಸಿದ್ಧಿವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಮಹಾಂತೇಶ ಪೂಜಾರಿ ಮಾತನಾಡಿ ಗೊರಬಾಳದಲ್ಲಿ ಪ್ರತಿವರ್ಷ ವಿವಿಧ ಯುವಕರ ಗುಂಪುಗಳು ವಿನಾಯಕನ ಪ್ರತಿಷ್ಠಾಪನೆಯನ್ನು ಅದ್ದೂರಿಯಾಗಿ ಮಾಡುತ್ತಾ ಬಂದಿದ್ದು ಈ ವರ್ಷವೂ ಅದ್ದೂರಿಯಾಗಿ ಮಾಡುವುದರ ಜೊತೆಗೆ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಗಣೇಶನನ್ನು ಸ್ವಾಗತಿಸಿದ್ದು ಗ್ರಾಮದ ಎಲ್ಲರಿಗೆ ಖುಷಿ ತಂದಿದೆ ಹಾಗೂ ಸತತ ಐದು ದಿನಗಳ ಕಾಲ ಗೊರಬಾಳ ಗ್ರಾಮದಲ್ಲಿ ವಿವಿಧ ಕಡೆ ಗಣೇಶನ ಪ್ರಸಾದ ವ್ಯವಸ್ಥೆ ಇದ್ದು ಗಣೇಶನ ಎಲ್ಲ ಭಕ್ತರು ಪ್ರಸಾದವನ್ನು ಸ್ವೀಕರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ವರದಿ: ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!