Ad imageAd image

1 ಕಿಸ್ ಗೆ 50 ಸಾವಿರ : ಪೋಷಕರಿಗೆ ಹನಿಟ್ರ್ಯಾಪ್ ಮಾಡುತ್ತಿದ್ದ ಶಿಕ್ಷಕಿ & ಗ್ಯಾಂಗ್ ಅಂದರ್

Bharath Vaibhav
1 ಕಿಸ್ ಗೆ 50 ಸಾವಿರ : ಪೋಷಕರಿಗೆ ಹನಿಟ್ರ್ಯಾಪ್ ಮಾಡುತ್ತಿದ್ದ ಶಿಕ್ಷಕಿ & ಗ್ಯಾಂಗ್ ಅಂದರ್
WhatsApp Group Join Now
Telegram Group Join Now

ಬೆಂಗಳೂರು : ಬೆಂಗಳೂರಿನಲ್ಲಿ ಪೋಷಕರಿಗೆ ಹನಿಟ್ರ್ಯಾಪ್ ಮಾಡುತ್ತಿದ್ದ ಶಿಕ್ಷಕಿಯೋರ್ವಳು ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾಳೆ.

ಬಂಧಿತಳನ್ನು ಶಿಕ್ಷಕಿ ಶ್ರೀದೇವಿ ಎಂದು ಗುರುತಿಸಲಾಗಿದೆ. ಶ್ರೀದೇವಿ ಜೊತೆ ಇಬ್ಬರು ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.

ಪೋಷಕರಿಗೆ ಹನಿಟ್ರ್ಯಾಪ್ ಗಾಳ ಹಾಕಿದ ಶಿಕ್ಷಕಿ.!ಬಂಧಿತಳನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಖಾಸಗಿ ಪ್ರೀಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಎಂದು ಗುರುತಿಸಲಾಗಿದೆ. ಆರೋಪಿ ಶ್ರೀದೇವಿ ರುಡಿಗಿಗೆ 2023 ರಲ್ಲಿ ರಾಕೇಶ್ ಎಂಬ ಪೋಷಕನ ಪರಿಚಯವಾಗಿತ್ತು. ರಾಕೇಶ್ನಿಂದ ಶಾಲೆ ನಿರ್ವಹಣೆ, ತಂದೆಯ ಚಿಕಿತ್ಸೆಗಂತ ಶ್ರೀದೇವಿ 4 ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದಿದ್ದಳು.

2024ರಮಾರ್ಚ್ನಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು. ಆದರೆ, ಹಣ ವಾಪಸ್ ಕೊಟ್ಟಿರಲಿಲ್ಲ. ನನಗೆ ಈಗ ಹಣ ಈಗ ಕೊಡಲು ಆಗುವುದಿಲ್ಲ. ನೀವು ಶಾಲೆಯ ಪಾರ್ಟನರ್ ಆಗಿ’ ಎಂದಿದ್ದಳು. ಇದಕ್ಕೆ ರಾಕೇಶ್ ಒಪ್ಪಿರಲಿಲ್ಲ. ನಂತರ ಶ್ರೀದೇವಿ ರಾಕೇಶ್ ಮನೆಗೆ ಹೋಗಿ ಮುತ್ತು ಕೊಟ್ಟಿದ್ದಳು.

ಶಾಲೆಯ ಪೋಷಕ ರಾಕೇಶ್ ಎಂಬುವವರಿಗೆ ಈಕೆ ಹನಿಟ್ರ್ಯಾಪ್ ಗಾಳ ಹಾಕಿದ್ದಾಳೆ. ರಾಕೇಶ್ ಜೊತೆ ಸಲುಗೆಯಿಂದ ವರ್ತಿಸಿಕೊಂಡ ಈಕೆ ರಾಕೇಶ್ ನನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ.

ರಾಕೇಶ್ ಗೆ ಮುತ್ತುಕೊಟ್ಟು, ಆತನ ಜೊತೆ ಖಾಸಗಿಯಾಗಿ ಕಾಲ ಕಳೆದು 50 ಸಾವಿರ ಪಡೆದುಕೊಂಡಿದ್ದಾಳೆ. ನಿನ್ನ ಅಶ್ಲೀಲ ವಿಡಿಯೋ, ಫೋಟೋ ನನ್ನ ಬಳಿ ಇದೆ. ನೀನು 15 ಲಕ್ಷ ಕೊಡದಿದ್ದರೆ ಅದನ್ನು ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾಳೆ.

ನಂತರ ಆರೋಪಿ ಗಣೇಶ್ ಎಂಬಾತ ರಾಕೇಶ್ ಗೆ ಬೆದರಿಕೆ ಒಡ್ಡಿ ಬ್ಲಾಕ್ ಮೇಲ್ ಮಾಡಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದನು. ನಂತರ 1.90 ಲಕ್ಷ ಹಣ ಪಡೆದು ಬಿಟ್ಟು ಕಳುಹಿಸಿದ್ದರು. ಮತ್ತೆ ಉಳಿದ ಹಣ ನೀಡುವಂತೆ ಬೆದರಿಕೆ ಹಾಕಿದ್ದನು. ನಂತರ ರಾಕೇಶ್ ಸಿಸಿಬಿಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಶಿಕ್ಷಕಿ ಶ್ರೀದೇವಿ,ಗಣೇಶ್, ಸಾಗರ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!