Ad imageAd image

೨೫ರಂದು ಗಂಗಾ ಸೊಸೈಟಿ ರಜತ ಮಹೋತ್ಸವ

Bharath Vaibhav
೨೫ರಂದು ಗಂಗಾ ಸೊಸೈಟಿ ರಜತ ಮಹೋತ್ಸವ
WhatsApp Group Join Now
Telegram Group Join Now

ಹುಬ್ಬಳ್ಳಿ: -ಇಲ್ಲಿನ ಹಳೇ ಕೋರ್ಟ್ ಸರ್ಕಲ್ ರಸ್ತೆಯ ರೇವಣಕರ ಕಾಂಪ್ಲೆಕ್ಸ್‌ನಲ್ಲಿರುವ ಗಂಗಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವ ಕಾರ್ಯಕ್ರಮ ಆ.೨೫ರಂದು ಬೆಳಿಗ್ಗೆ ೧೦.೩೦ಗಂಟೆಗೆ ನಗರದ ಗೋಕುಲ್ ರಸ್ತೆಯ ಹೆಬಸೂರ ಭವನದಲ್ಲಿ ನಡೆಯಲಿದೆ ಎಂದು ಎಂದು ಸೊಸೈಟಿ ಅಧ್ಯಕ್ಷ ಹನುಮಂತಪ್ಪ ನಾಯ್ಕೋಡಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದ ಸಾನಿಧ್ಯವನ್ನು ನರಸೀಪುರ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ವಹಿಸಲಿದ್ದು, ಕೇಂದ್ರ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಜಿ. ಶಂಕರ, ಜ.ಸಿ. ಕೋಟಿಯನ್, ಬಿ.ಮೌಲಾಲಿ, ಜೆ. ಶ್ರೀನಿವಾಸ, ಪ್ರಫುಲ್ಲಚಂದ್ರ ರಾಯನಗೌಡ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

೧೯೯೫ರಲ್ಲಿ ೪ಲಕ್ಷ ಬಂಡವಾಳದೊಂದಿಗೆ ೫೨೫ ಸದಸ್ಯರ ಸದಸ್ಯತ್ವದೊಂದಿಗೆ ನೋಂದಾಯಿಸಲ್ಪಟ್ಟ ಸೊಸೈಟಿ ಇದೀಗ ೨೩೪೧ ಸದಸ್ಯರನ್ನು ಹೊಂದಿದ್ದು, ಈ ವರ್ಷ ೧೭ ಲಕ್ಷ ಲಾಭಾಂಶ ಹೊಂದಿದೆ ಎಂದರು. ಗೋಷ್ಠಿಯಲ್ಲಿ ಸಂಸ್ಥಾಪಕ ಅಧ್ಯಕ್ಷ ವೈ.ಆರ್.ಗೇಟಿಯವರ, ಬಸವರಾಜ ಗುರ್ಕಿ, ಎಲ್.ಜಿ. ಅಂಬಿಗೇರ, ನಾಗರಾಜ ಮಡ್ಡೇರ, ರಾಮಣ್ಣ ಹರಪನಹಳ್ಳಿ ಪಾಲ್ಗೊಂಡಿದ್ದರು.

  ವರದಿ- ಸುಧೀರ್ ಕುಲಕರ್ಣಿ ‌

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!