ಚಿಟಗುಪ್ : ಚಿಟಗುಪ್ಪ ತಾಲ್ಲೂಕಿನ ಕರಕನಳ್ಳಿ ಗ್ರಾಮದ ಐತಿಹಾಸಿಕ ಗುರು ಗಂಗಾಧರ ಬಕ್ಕ ಪ್ರಭುಗಳ 211ನೇ ಪುಣ್ಯತಿಥಿ ಹಾಗೂ ಜಾತ್ರಾ ಮಹೋತ್ಸವ ಮಾರ್ಚ್ 13ರಿಂದ 19ವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಕಾರ್ಯದರ್ಶಿ ಸಂಜಯ ದೇಸಾಯಿ ತಿಳಿಸಿದರು.
ದಿನಾಂಕ 13ರಂದು ಶ್ರೀ ಗುರು ಗಂಗಾಧರ ಬಕ್ಕ ಪ್ರಭುಗಳ ಪುಣ್ಯತಿಥಿ ಸ್ಮರಣೆ ಆರಾಧನೆ,14 ಮತ್ತು 15ರಂದು ಅಭಿಷೇಕ ಪ್ರವಚನ,ಭಜನೆ,16ರಂದು ರುದ್ರಭಿಷೇಕ ಅಗ್ನಿ ಪೂಜೆ ಹಾಗೂ ಪಶುಗಳ ಪ್ರದರ್ಶನ ಮತ್ತು ಸಂಗೀತ ದರ್ಬಾರ್,17ರಂದು ಪಲ್ಲಕಿ ಪುರವಂತರ ಸೇವೆಯೊಂದಿಗೆ ಅಗ್ನಿ ತುಳಿಯುವುದು,ಅಂದು ಸಂಜೆ ರಥೋತ್ಸವ,ಮದ್ದು ಸುಡುವ ಕಾರ್ಯಕ್ರಮ,18 ರಂದು ಬಳಗ್ಗೆ ಪೈಲ್ವಾನರಿಂದ ಜಂಗಿ ಕುಸ್ತಿ,19ರಂದು ಬಕ್ಕಪ್ರಭು ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೋಪಾಲ ರೆಡ್ಡಿ ಅಶೋಕ ರೆಡ್ಡಿ, ಜಗನ್ನಾಥ ರೆಡ್ಡಿ,ರಾಜಪ್ಪ ಮುತ್ಯ,ಶಿವಪುತ್ರ ಮಾಲಿಪಾಟೀಲ್ ಪ್ರಭು ನೆಲವಾಳ,ನಾಗಪ್ಪ ಮಕಾಜಿ,ಅಶೋಕ,ಬಸಯ್ಯಸ್ವಾಮಿ, ಪ್ರಭು ಘಾಟೋಳ್ಳಿ, ಭೀಮಶಾ ಬುಡ್ಡಾ ಬಕ್ಕಯ್ಯ ಸ್ವಾಮಿ,ನಾಗಪ್ಪ ಶಿಕ್ಷಕ, ಜಗನ್ನಾಥ ಗಾರಿ ಇದ್ದರು.
ವರದಿ : ಸಜೀಶ ಲಂಬುನೋರ




