ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಚುನಾವಣೆಯಲ್ಲಿ ಎಐಟಿಯುಸಿ ತಕ್ಕಡಿ ಗುರುತಿನ ಪಕ್ಷದಿಂದ ಗಂಗಪ್ಪ ಶಾಕೋದಿ ( ಗಂಗೂ ) ಚುನಾವಣೆಯಲ್ಲಿ ತಾಂತ್ರಿಕ ವಿಭಾಗ ಬಿ ಇಂದ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆ ಹೇಳಿದ ಇವರು ತೀವ್ರ ಪೈಪೋಟಿ ನಡೆದಿದೆಯೋ ಮತ ಎಣಿಕೆ ಸಂದರ್ಭದಲ್ಲಿ ಎಐಟಿಯುಸಿ ತಕ್ಕಡಿ ಗುರುತಿನ ಪಕ್ಷದಿಂದ ಮೊದಲನೇ ಖಾತೆ ತೆರೆಯುವ ಮೂಲಕ ಭರ್ಜರಿ ಜಯಭೇರಿ ತಂದುಕೊಟ್ಟರು ಅತಿ ಚಿಕ್ಕ ವಯಸ್ಸಿನಲ್ಲಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಚುನಾವಣೆಯಲ್ಲಿ ಹಟ್ಟಿ ಪಟ್ಟಣದಿಂದ ಗೆದ್ದ ಮೊದಲ ವ್ಯಕ್ತಿ ಇವರಾಗಿರುತ್ತಾರೆ.
ಸರಳ ವ್ಯಕ್ತಿಯಾದ ಇವರು ಇವರ ವ್ಯಕ್ತಿತ್ವ ಕಂಡು ಕಾರ್ಮಿಕರು ತಾಂತ್ರಿಕ ವಿಭಾಗ ಬಿ ದಿಂದ ಗಂಗಪ್ಪ ಇವರಿಗೆ ಆಶೀರ್ವಾದ ಮಾಡುವ ಮೂಲಕ ಗೆಲ್ಲಿಸಿದ್ದಾರೆ. ಎಐಟಿಯುಸಿ ಮುಖಂಡರು ಮತ್ತು ಕಾರ್ಮಿಕ ಸಿಬ್ಬಂದಿಗಳು ಹಾಗೂ ಸ್ನೇಹಿತರು ಶುಭಕೋರಿದ್ದಾರೆ.
ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಚುನಾವಣೆಯಲ್ಲಿ ನನ್ನ ಮೇಲೆ ನಂಬಿಕೆಯಿಟ್ಟು ಎಐಟಿಯುಸಿ ಸಂಘದ ಮುಖಂಡರು ಚುನಾವಣೆಗೆ ನಿಲ್ಲಲು ನನಗೆ ಪಕ್ಷದ ವತಿಯಿಂದ ಟಿಕೆಟ್ ನೀಡಿರುವುದರಿಂದ ಮತ್ತು ತಾಂತ್ರಿಕ ವಿಭಾಗ ಬಿ ಕಾರ್ಮಿಕರ ಸಹಾಯದಿಂದ ಈ ಗೆಲುವು ಸಾಧಿಸಲು ಸಾಧ್ಯವಾಗಿದೆ ಇದರಿಂದ ತಮ್ಮೆಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತೇನೆ
ಇಂತಿ ನಿಮ್ಮ ಕಾರ್ಮಿಕರ ಸೇವಕ ಗಂಗಪ್ಪ ಶಾಕೋದಿ ( ಗಂಗೂ )




