ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಾಧಕರಿಗೆ ಶ್ರೀ ಜನ್ಯ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಿದ್ದು ಆರ್. ಮತ್ತು ಶ್ರೀಮತಿ ರಮ್ಯಾ ಜಿ.ಸಿದ್ದು ಇವರುಗಳ ನೇತೃತ್ವದಲ್ಲಿ ‘ಕಲಾ ವೈಭವ ಪ್ರಶಸ್ತಿ ಮತ್ತು ಕರ್ನಾಟಕ ಕಲಾ ರತ್ನ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಗಂಗೋಂಡನಹಳ್ಳಿ ಆಯೋಜಿಸಲಾಗಿತ್ತು.
ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಭೈರವೇಶ್ವರ ಟ್ರಾವೆಲ್ಸ್ ಮಾಲೀಕ ಎಂ.ಮಂಜುನಾಥ್ ಟ್ರಾವೆಲ್ಸ್ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಅದರ ಜೊತೆಗೆ ಶ್ರಮ, ಶ್ರದ್ದೆ ಮತ್ತು ಮನೋಭಾವ ಒಗ್ಗೂಡಿಸಿ ಸೇವೆ ಸಲ್ಲಿಸಿದಾಗ ಮಾತ್ರ ನಾವು ಸಾಧಕರ ಪಟ್ಟಿಯಲ್ಲಿ ಸೇರ ಬಹುದು ಅದರಂತೆ ಶ್ರೀ ಜನ್ಯ ಫೌಂಡೇಷನ್ ಅವರು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ಮಾಡಿದ್ದು ತುಂಬಾ ಸಂತೋಷವಾಯಿತು ಎಂದು ಮಂಜುನಾಥ್ ಟ್ರಾವೆಲ್ಸ್ ಸಾಧಕರನ್ನು ಉದ್ದೇಶಿಸಿ ಮಾತನಾಡಿದರು.ಜನ್ಯ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಿದ್ದು ಅವರು ಸರ್ವರಿಗೂ ಸ್ವಾಗತಿಸಿದರು.
ಪ್ರಶಸ್ತಿ ಪುರಸ್ಕೃತರಾದ ಮುನಿರಾಜು,ಅಕ್ಕಿಪೇಟೆ ಲೋಕೇಶ್,ಮಂಜುಳಾ, ವೀರಭೈರಪ್ಪ, ವೆಂಕಟಪ್ಪ, ಡಾ.ನಾಗರಾಜು ಕಾಳೆರಿ, ಸಿದ್ದಯ್ಯ ಬಿ, ನಿಂಗಮ್ಮ,ನಾಗರಾಜು ಜಿ ಎಸ್, ಸ್ವಾಮಿ,ಸಿದ್ದನಂಜಯ್ಯ, ಗಂಗಮ್ಮ, ರೇವಣಸಿದ್ದಪ್ಪ ಇವರುಗಳಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನಕ ಇಂಜಿನಿಯರಿಂಗ್ಸ್ ಮಾಲೀಕ ಲತಾ ಸಿದ್ದನಂಜಯ್ಯ, ಪ್ರಸಾದ್ ಕುಮಾರ್ ಆರ್, ರಂಗನಾಥ್ ಕಲ್ಯಾಣಪುರ, ಗಂಗಾಧರ್, ಪಾಪೇಗೌಡ ಮತ್ತು ಜನ್ಯ ಫೌಂಡೇಷನ್ ಪದಾಧಿಕಾರಿಗಳು ಸದಸ್ಯರು ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
ವರದಿ :ಅಯ್ಯಣ್ಣ ಮಾಸ್ಟರ್