Ad imageAd image

ಗೌರಿ ಗಣೇಶ ಮತ್ತು ಈದ್‌ ಮಿಲಾದ್‌ ಹಬ್ಬದ ನಿಮಿತ್ತ ಕಂಪ್ಲಿ ನಗರದಲ್ಲಿ ಪೊಲೀಸ್‌ ಪಥಸಂಚಲನ

Bharath Vaibhav
ಗೌರಿ ಗಣೇಶ ಮತ್ತು ಈದ್‌ ಮಿಲಾದ್‌ ಹಬ್ಬದ ನಿಮಿತ್ತ ಕಂಪ್ಲಿ ನಗರದಲ್ಲಿ ಪೊಲೀಸ್‌ ಪಥಸಂಚಲನ
WhatsApp Group Join Now
Telegram Group Join Now

ಕಂಪ್ಲಿ: ಗಣೇಶ ಮತ್ತು ಈದ್‌ ಮಿಲಾದ್‌ ಹಬ್ಬದ ನಿಮಿತ್ತ ಪಟ್ಟಣದಲ್ಲಿಸೂಕ್ತ ಬಂದೋಬಸ್ತ್ ಕೈಗೊಳ್ಳುವ ನಿಟ್ಟಿನಲ್ಲಿಪಟ್ಟಣದ ಪೊಲೀಸ್‌ ಅಡಿಷನಲ್ ಎಸ್ ಪಿ. ಎನ್ ನವೀನ್ ಕುಮಾರ್ ಅವರ ನೇತೃತ್ವದಲ್ಲಿಪೊಲೀಸರು ಸೋಮವಾರ ಪಥಸಂಚಲನ ನಡೆಸಿದರು.

ಅಡಿಷನಲ್ ಎಸ್ ಪಿ ಎನ್ ನವೀನ್ ಕುಮಾರ್ ಮಾತನಾಡಿ, ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂದರ್ಭದಲ್ಲಿಯಾವುದೇ ಗಲಾಟೆ ಗದ್ದಲಕ್ಕೆ ಅವಕಾಶ ನೀಡಬಾರದು. ಸಂಜೆ ಮತ್ತು ರಾತ್ರಿ ನಿಗದಿಪಡಿಸಿದ ಸಮಯದಲ್ಲಿಸಾರ್ವಜನಿಕ ಕಾರ್ಯಕ್ರಮಗಳನ್ನು ಮುಗಿಸಬೇಕು. ವೃದ್ಧರು, ರೋಗಿಗಳು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಬ್ಬರದ ಧ್ವನಿವರ್ಧಕ ಮತ್ತು ಡಿಜೆ ಬಳಕೆ ನಿಧಿಷೇಧ ಮಾಡಲಾಗಿದೆ. ಮತ್ತು ಈದ್‌ ಮಿಲಾದ್‌ ಹಬ್ಬವು ಶಾಂತ ರೀತಿಯಲ್ಲಿಮಾಡಬೇಕು ಎಂದು ತಿಳಿಸಿದರು

ಶಾಂತಿ ಸ್ಥಾಪನೆ ನಿಟ್ಟಿನಲ್ಲಿಈಗಾಗಲೇ ಪೊಲೀಸ್‌ ವರಿಷ್ಠಾಧಿಕಾರಿಗಳ ನೇಧಿತೃತ್ವದಲ್ಲಿಸಭೆ ಮಾಡಿದ್ದು, ಸಾರ್ವಜನಿಕರ ಸಮಸ್ಯೆ ಆಲಿಸಿ ಅವುಗಳನ್ನು ಬಗೆಹರಿಸಲು ಪೊಲೀಸರು ಬದ್ಧರಾಗಿದ್ದಾರೆ ಎಂದು ತಿಳಿಸಿದ್ದು. ಹಾಗಾಗಿ, ನಿಬಂಧನೆಗಳಿಗೆ ಒಳಪಟ್ಟು, ಮಾರ್ಗಸೂಚಿ ಪ್ರಕಾರ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.

ಪೊಲೀಸ್‌ ಠಾಣೆಯಿಂದ ಪ್ರಾರಂಭಗೊಂಡ ಪಥಸಂಚಲನ ಅಂಬೇಡ್ಕರ್ ಸರ್ಕಲ್ ನಡೋಲ್ ಮಸೀದಿ ಸರ್ಕಾರಿ ಆಸ್ಪತ್ರೆ ರಸ್ತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿಪೊಲೀಸರು ಪಥಸಂಚಲನ ನಧಿಡೆಸಿ ಶಾಂತಿ ಸಂದೇಶ ಸಾರಿದರು. ಡಿ ವೈ ಎಸ್ ಪಿ ಪ್ರಸಾದ್ ಗೋಖಲೆ ಸಿಪಿಐ ವಾಸು ಕುಮಾರ್ ಪಿಎಸ್ಐ ಅವಿನಾಶ್ ಕುರುಗೋಡು ಪಿಎಸ್ಐ ಸುಪ್ರೀತ್ ಸೇರಿದಂತೆ, ಪೋಲಿಸ್‌ ಹವಾಲ್ದಾರ್‌ರು, ಪೊಲೀಸ್‌ ಪೇದೆಗಳು ಭಾಗವಹಿಸಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!