ಸಿರುಗುಪ್ಪ : ನಗರದ ತಹಶೀಲ್ದಾರ್ ಕಛೇರಿಯಲ್ಲಿ ಗೌಸಿಯಾ ಬೇಗಂ ಅವರು ತಹಶೀಲ್ದಾರರಾಗಿ ಜೂನ್.30 ಸೋಮವಾರ ಸಾಯಂಕಾಲ ಅಧಿಕಾರ ಸ್ವೀಕರಿಸಿದರು. ಪ್ರಭಾರಿ ತಹಶೀಲ್ದಾರರಾಗಿದ್ದ ನರಸಪ್ಪ ಅವರು ಅಧಿಕಾರ ಹಸ್ತಾಂತರಿಸಿದರು.
ನಂತರ ಮಾತನಾಡಿ ಕಳೆದ ಕೆಲ ತಿಂಗಳಿನಿಂದ ನಾನು ಪ್ರಭಾರಿಯಾಗಿ ನಿರ್ವಹಿಸಿದ ನನಗೆ ಇಲ್ಲಿನ ಕಂದಾಯ ಮತ್ತು ಆಹಾರ ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅದರಂತೆ ಈಗಿನ ತಹಶೀಲ್ದಾರರಾದ ಗೌಸಿಯಾ ಮೇಡಂ ಅವರಿಗೂ ಸಹಕರಿಸಬೇಕೆಂದು ತಿಳಿಸಿದರು.
ತಹಶೀಲ್ದಾರ್ ಗೌಸಿಯಾ ಬೇಗಂ ಅವರು ಮಾತನಾಡಿ ನಮ್ಮದು ಎಲ್ಲಾ ಇಲಾಖೆಗಳ ಉಸ್ತುವಾರಿಯನ್ನು ನೋಡಿಕೊಳ್ಳುವ ದೊಡ್ಡ ಇಲಾಖೆಯಾಗಿದ್ದರಿಂದ ಹಲವು ಒತ್ತಡಗಳಿರುವುದು ಸಾಮಾನ್ಯ.
ಆದ್ದರಿಂದ ನಾವೆಲ್ಲರೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕಿದೆ. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜೊತೆಗೂಡಿ ಉತ್ತಮ ಕಾರ್ಯನಿರ್ವಹಿಸೋಣವೆಂದರು.
ಕುರುಗೋಡು ತಾಲೂಕಿಗೆ ತಮ್ಮ ಸ್ಥಾನಕ್ಕೆ ಮರಳಿದ ತಹಶೀಲ್ದಾರ್ ನರಸಪ್ಪ ಅವರನ್ನು ಸ್ಮನಾನಿಸಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಬೀಳ್ಕೊಡಲಾಯಿತು.ನೂತನ ತಹಶೀಲ್ದಾರರನ್ನು ಅಭಿನಂದಿಸಲಾಯಿತು.
ಇದೇ ವೇಳೆ ಉಪತಹಶೀಲ್ದಾರರಾದ ಯಾಕೂಬ್ ಅಲಿ, ಸಿದ್ದಾರ್ಥ್ ಕಾರಂಜಿ, ಕಂದಾಯ ನಿರೀಕ್ಷಕರಾದ ಮಂಜುನಾಥ, ಮಲ್ಲಿಕಾರ್ಜುನ, ಹನುಮಂತಪ್ಪ, ಶೇಕ್ಷಾವಲಿ, ಗ್ರಾಮಾಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಮ್.ರಾಮಪ್ಪ, ತಾಲೂಕಾಧ್ಯಕ್ಷ ಮಂಜುನಾಥ, ಕಂದಾಯ ಇಲಾಖೆ ತಾಲೂಕಾಧ್ಯಕ್ಷ ಶ್ರೀಶೈಲ, ಹಿರಿಯ ಅಧಿಕಾರಿ ಪರಮೇಶಪ್ಪ ಹಾಗೂ ಗ್ರಾಮಾಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




