Ad imageAd image
- Advertisement -  - Advertisement -  - Advertisement - 

ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ

Bharath Vaibhav
ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ
WhatsApp Group Join Now
Telegram Group Join Now

ನವದೆಹಲಿ : ಈವರೆಗೆ ‘ಟೀಮ್ ಇಂಡಿಯಾ’ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಇತ್ತೀಚೆಗಷ್ಟೇ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹೀಗಾಗಿಯೇ ಮುಂದಿನ ದಿನಗಳಲ್ಲೂ ಅವರೇ ಟೀಮ್ ಇಂಡಿಯಾ ಕೋಚ್ ಆಗಿ ಮುಂದುವರೆಯಲಿದ್ದಾರಾ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಬಿಸಿಸಿಐನಿಂದ ಅಧಿಕೃತ ಪ್ರಕಟಣೆ ಅಷ್ಟೇ ಹೊರ ಬೀಳಬೇಕಿದೆ. ಕೋಚ್ ಆಯ್ಕೆ ಹುದ್ದೆಗೆ ಗೌತಮ್ ಗಂಭೀರ್ ಜೊತೆ ಡಬ್ಲ್ಯೂ.ವಿ. ರಮಣ್ ಸ್ಪರ್ಧೆಯಲ್ಲಿದ್ದು, ಅಂತಿಮವಾಗಿ ಗೌತಮ್ ಗಂಭೀರ್ ಅವರಿಗೆ ಹುದ್ದೆ ಒಲಿದಿದೆ ಎಂದು ತಿಳಿದುಬಂದಿದೆ.

ಇದರ ಮಧ್ಯೆ ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಷಾ, ಸದ್ಯದಲ್ಲೇ ಐಸಿಸಿ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಬಿಸಿಸಿಐ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎಂಬುದು ಸಹ ಕುತೂಹಲ ಕೆರಳಿಸಿದೆ.

WhatsApp Group Join Now
Telegram Group Join Now
Share This Article
error: Content is protected !!