ನವದೆಹಲಿ: ಮುಂದಿನ ಮೂರು ತಿಂಗಳು ಭಾರತ ಕ್ರಿಕೆಟ್ ತಂಡಕ್ಕೆ ಅಂತಾರಾಷ್ಟ್ರೀಯ ಪಂದ್ಯಗಳಿಲ್ಲ. ಜೂನ್ 20 ರಿಂದ ಆರಂಭವಾಗುವ ಇಂಗ್ಲೆಂಡ್ ಪ್ರವಾಸದಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭವಾಗಲಿದೆ.
ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗಲಿದ್ದು, ಆ ನಂತರವೇ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ತೆರಳಲಿದೆ. ಆದರೆ ಇದಕ್ಕೆ ಮುನ್ನ ಭಾರತ ಎ, ತಂಡ ಇಂಗ್ಲಂಡ್ ಪ್ರವಾಸ ಕೈಗೊಳ್ಳಲಿದ್ದು, ಭಾರತದ ಕೋಚ್ ಗೌತಮ್ ಗಂಭೀರ ಎ, ತಂಡದೊಂದಿಗೆ ಇಂಗ್ಲೆಂಡ್ ಗೆ ತೆರಳುವ ಯೋಜನೆ ಹಾಕಿಕೊಂಡಿದ್ದಾರಂತೆ. ಎ ತಂಡಲ್ಲಿನ ಪ್ರತಿಭೆಗಳನ್ನು ಗುರುತಿಸುವ ಸಂಬಂಧವಾಗಿಯೂ ಭಾರತದ ಮುಖ್ಯ ಕೋಚ್ ಗೆ ಈ ಪ್ರವಾಸ ನೆರವಾಗಲಿದೆ ಎಂಬುದು ಲೆಕ್ಕಾಚಾರ.




