Ad imageAd image

ಗುಡಸ ಗ್ರಾಮದ ಗಾಯರಾಣ ಜಮೀನಿನ ಅತಿಕ್ರಮಣ ತೆರವಿಗೆ ಆಗ್ರಹ

Bharath Vaibhav
ಗುಡಸ ಗ್ರಾಮದ ಗಾಯರಾಣ ಜಮೀನಿನ ಅತಿಕ್ರಮಣ ತೆರವಿಗೆ ಆಗ್ರಹ
WhatsApp Group Join Now
Telegram Group Join Now

ಹುಕ್ಕೇರಿ: ಹುಕ್ಕೇರಿ ತಾಲೂಕಿನ ಹುಕ್ಕೇರಿ ಪಟ್ಟಣದ ಕೋರ್ಟ ವೃತ್ತದಲ್ಲಿ ಕುರಿ ಹಾಗೂ ಮೇಕೆಗಳಿಂದ ಪ್ರತಿಭಟನೆ ನಡೆಸಲಾಯಿತು. ಗಾಯರಾಣ ಜಾಗೆಯ ಅತಿಕ್ರಮಣ ತೆರವುಗಾಗಿ ಕುರಿಗಾಹಿಗಳಿಂದ ವಿನೂತನ ಪ್ರತಿಭಟನೆ ಜರುಗಿತು.

5 ಸಾವಿರ ಕುರಿಗಳಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ಕುರಿ ಮೇಕೆಗಳ ಪ್ರತಿಭಟನೆಯಿಂದ ಒಂದು ಕಿ.ಮೀ ಟ್ರಾಫಿಕ್ ಜಾಮ್ ಆಯಿತು. ಪ್ರತಿಭಟನಾ ರ್ಯಾಲಿ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಲಿರುವ ಮೂಲಕ ಪ್ರತಿಭಟನೆ ನಡೆಯಿತು.

ಮುಖಂಡ ಭೀಮಶಿ ಭಾಗಿ ಮಾತನಾಡಿ, ಪೂರ್ವಜರಿಂದಲೂ ಕುರಿ ಮೇಯಿಸಲು ಮೀಸಲಿಟ್ಟಿದ ಜಮೀನನ್ನು ಅತಿಕ್ರಮಿಸುವ ಮೂಲಕ ಕಟ್ಟಡಗಳನ್ನು ಕಟ್ಟುತ್ತಿದ್ದ, ಅತಿಕ್ರಮವನ್ನು ತಹಶೀಲ್ದಾರರು ತೆರವುಗೊಳಿಸಿ ಕುರಿ ಮೇಯಿಸಲು ಅನುವುಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಕುರಿಗಾಯಿ ಬಸವಣ್ಣಿ ಮಾತನಾಡಿ ಅತಿಕ್ರಮಣದಿಂದ ಕುರಿ ಮೇಯಿಸಲು ಜಾಗ ಇಲ್ಲದಂತ್ತಾಗಿದ್ದು, ಈ ಬಗ್ಗೆ ಹಲವು ಬಾರಿ ತಹಶೀಲ್ದಾರರಿಗೆ ಮನವಿ ಕೊಟ್ಟರು, ಯಾವುದೇ ಕ್ರಮ ಕೈಗೊಂಡಿಲ್ಲ, ಕೂಡಲೇ ಕುರಿ ಮೇಯಿಸಲು ಅನವು ಮಾಡಿಕೊಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು. ಹಾಲುಮತ ಸಮಾಜದ ತಾಲೂಕಾ ಮುಖಂಡರು ಹಿರಿಯರು ಕುರಿಮಯಿಸುವ ತಾಯಂದಿರು ಯುವಕರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಬಸವಣ್ಣಿ ಭೀ ನಿಡಸೋಶಿ, ಗುರುಸಿದ್ದ ಗೋಟುರಿ, ರಾಮಪ್ಪ ಚಂದರಗಿ, ಲಕ್ಕಪ್ಪ ಸ ಹಾಲಟ್ಟಿ, ಮಲ್ಲಪ್ಪಾ ಹಾಲಟ್ಟಿ, ಬೀರಪ್ಪ ಮಾ ಮರ್ಣಣಿಕೇರಿ, ಸತ್ತೆಪ್ಪಾ ಖಿಲಾರಿ, ಬಸಪ್ಪಾ ಸಿ ವಂಟಮೂರಿ, ಶಂಕರ ಕರಿಗಾರ, ರಾಯಪ್ಪಾ ಕೆಂಪಾಮಲದಿನ್ನಿ ಹಾಗೂ ಹಾಲು ಮತದ ಕುರುಬರ ಸಮಾಜದ ಮುಖಂಡರು ಹಾಗೂ ಕುರಿಗಾಯಕರು ಉಪಸ್ಥಿತರಿದ್ದರು.

ವರದಿ: ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!