—————————————-ಶುಭಮಾನ್ ಗಿಲ್ ಪಡೆಗೆ ಹಾರ್ಧಿಕ ಸಾರಥ್ಯದ ಮುಂಬೈ ಇಂಡಿಯನ್ಸ್ ಸವಾಲು
ಚಂದಿಗಢ: ಐಪಿಎಲ್ ಟ್ವೆಂಟಿ- 20 ಕ್ರಿಕೆಟ್ ಪಂದ್ಯಾವಳಿಯ ಎಲಿಮಿನೇಟರ್( ಸೋತವರು ಮನೆಗೆ) ಮಹತ್ವದ ಪಂದ್ಯ ಇಂದು ಇಲ್ಲಿನ ಮಹಾರಾಜ ಯದವೀಂದ್ರ ಕ್ರೀಡಾಂಗಣದಲ್ಲಿ ಸಾಯಂಕಾಲ 7:30 ಕ್ಕೆ ನಡೆಯಲಿದೆ.

ಈ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎದುರು ಬದುರು ಆಗಲಿವೆ. ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎರಡೂ ತಂಡಗಳು ಬಲಿಷ್ಠ ತಂಡಗಳಾಗಿದ್ದು, ಯಾವ ತಂಡ ಫೈನಲ್ ಪ್ರವೇಶಿಸಲಿದೆ ಎಂಬುದು ಪಂದ್ಯದ ಫಲಿತಾಂಶದ ನಂತರವೇ ತಿಳಿಯಲಿದೆ.
ಮುಂಬೈ ಇಂಡಿಯನ್ಸ್ ತಂಡ ಸಾಕಷ್ಟು ಏರಿಳಿತಗಳನ್ನು ಕಂಡು ಕ್ವಾಲಿಪಾಯರ್ ಹಂತ ತಲುಪಿದೆ. ಇನ್ನೊಂದೆಡೆ ಗುಜರಾತ್ ಟೈಟನ್ಸ್ ನಿರಂತರ ಉತ್ತಮ ನಿರ್ವಹಣೆ ತೋರಿ ಕ್ವಾಲಿಪಾಯರ್ ಹಂತ ತಲುಪಿದೆ. ಆದರೆ ಅಂಕ ಪಟ್ಟಿಯಲ್ಲಿ ಈ ತಂಡ ಮೂರನೇ ಸ್ಥಾನ ಪಡೆದಿದ್ದರಿಂದ ಈ ಪಂದ್ಯದಲ್ಲಿ ಸೋತರೆ ಮನೆಗೆ ಹೋಗುವ ಸ್ಥಿತಿಗೆ ಬಂದು ತಲುಪಿದೆ.




