ಕಡ್ಡಾಯವಾಗಿ ಸದಸ್ಯತ್ವ ಪಡೆದುಕೊಳ್ಳಿ ರಾಜ್ಯಸಂಘದ ಎಲ್.ಐ.ಸಿ.
ಜೊನಲ್ ಕಾರ್ಯದರ್ಶಿ ಪಿ. ರಾಮಚಂದ್ರ ಕರೆ
ಪಾವಗಡ: ಭಾರತೀಯ ಜಿವಾ ವಿಮಾ ಪ್ರತಿನಿಧಿಗಳ ಸಂಘವನ್ನು ಬಲ ಪಡಿಸಲು ಕಡ್ಡಾಯವಾಗಿ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ರಾಜ್ಯಸಂಘದ ಜೊನಲ್ ಕಾರ್ಯದರ್ಶಿ ಪಿ. ರಾಮಚಂದ್ರ ತಿಳಿಸಿದರು.
ಪಟ್ಟಣದ ನವನಿಧಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಪಾವಗಡ ತಾಲ್ಲೂಕು ವಿಮಾ ಪ್ರತಿನಿಧಿಗಳ ಪಧಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲರೂ ಒಗ್ಗಟ್ಟಾಗಿ ನಮ್ಮ ವಿಮಾ ಸಂಘಕ್ಕೆ ಬೆಂಬಲ ನೀಡಬೇಕು ಮತ್ತು ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಂಘದ ನಿಯಮಗಳಿಗೆ ಬದ್ದರಾಗಿರಬೇಕು ಎಂದು ತಿಳಿಸಿದರು.
ರಾಜ್ಯ ವಿಮಾ ಪ್ರತಿನಿಧಿಗಳ ಕಾರ್ಯದರ್ಶಿ ರಾಜಣ್ಣ, ಮಾತನಾಡಿ, ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ನಲ್ಲಿ ಅತಿ ಹೆಚ್ಚು ಅಂಕ ಪಡೆದುಕೊಂಡ ಪ್ರತಿನಿಧಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಡಿಬಿಜನಲ್ ಅದ್ಯಕ್ಷರಾದ ದೀಲಿಪ್ ಪಟೇಲ್ ಹಾಗೂ ಕಾರ್ಯದರ್ಶಿ ಬೆಂಗಳೂರು ವಿಭಾಗದ ,ರಾಜಣ್ಣ,
ಶಿರಾ ಅದ್ಯಕ್ಷರಾದ ತಿಮ್ಮಪ್ಪ, ಮತ್ತಿತರರು ಮಾತನಾಡಿದರು.
ಪಾವಗಡ ತಾಲ್ಲೂಕು ಭಾರತೀಯ ಜಿವವಿಮಾ ನಿಗಮದ ಅದ್ಯಕ್ಷರಾಗಿ ಪಿ. ಬಾಲಕೃಷ್ಣ, ಕಾರ್ಯದರ್ಶಿಯಾಗಿ ಎ. ನಾಗಬೂಶಣ್, ಖಜಾಂಚಿಯಾಗಿ ಈ. ಅಕ್ಕಲಪ್ಪ, ಅವಿರೋದವಾಗಿ ಆಯ್ಕೆಯಾದರು.
ಈ ವೇಳೆ ಅಂದ್ರದ ಮಡಕಶಿರಾ ತಾಲ್ಲೂಕು ಅಧ್ಯಕ್ಷರಾದ ಆಳ್ಳೂರಪ್ಪ,ಸಿ. ಸದಸ್ಯರಾದ ಹನುಮಂತಪ್ಪ, ಹಿಂದೂಪುರದ ಅಧ್ಯಕ್ಷರಾದ ಬಿ. ಆರ್. ವೆಂಕಟರಾಮರೆಡ್ಡಿ, ಖಜಾಂಚಿ, ಎಂ.ಎಸ್. ಕುಮಾರ್, ಸೀನಿಯರ್ ಏಜೆಂಟ್ ಡಿ.ಗೋವಿಂದರಾಜು, ಪಿ.ಟಿ. ಲಕ್ಷ್ಮಿ ನರಸಿಂಹಯ್ಯ, ವೆಂಕಟೇಶಪ್ಪ, ಅಬ್ದುಲ್ ಸತ್ತಾರ್, ಎಚ್. ಕೃಷ್ಣಪ್ಪ, ರಮೇಶ್ ಗುಪ್ತಾ, ಎಸ್. ಅಂಜಿನಪ್ಪ, ವೇಣುಗೋಪಾಲ್‌ರಾವ್, ತಿಪ್ಪೇಸ್ವಾಮಿ, ಎಂ. ನಾಗಪ್ಪ,ಮೈಲಾರರೆಡ್ಡಿ, ಎ. ಕೆ.ಬಿ. ಧನುಂಜಯ, ಪ್ರಸನ್ನಕುಮಾರ, ಜಿ.ವಿ.ರಾಜಪ್ಪ, ಮಲ್ಲಿಕಾರ್ಜುನ, ಶ್ರೀನಿವಾಸಲು, ವೀರಾಂಜನೇಯಲು, ಗೋಪಾಲ, ಬಿ.ವಿ.ನರಸಿಂಹಮೂರ್ತಿ, ಶಿವಂಶಕರ್, ಸಿ. ಶಶಿಧರ್,ಎಂ. ವೀರಣ್ಣ, ಲೋಕೇಶ್ವರಪ್ಪ, ಎಚ್. ನಾರಾಯಣಪ್ಪ, ಗಂಗರಾಜು, ಪಿ.ಎನ್. ಸುಧಾಮಣಿ, ಶಾರದಾಭಾಯಿ,ಸುಶೀಲಾಬಾಯಿ, ಸಿದ್ದಗಂಗಮ್ಮ, ಪುಷ್ಪಲತಾ, ಬಾಗ್ಯಮ್ಮ, ಎಂಎಸ್. ಮಂಜುನಾಥ್ ಬಿ. ಚಂದ್ರಶೇಖರಯ್ಯ, ರಾಘವೇಂದ್ರಗುಪ್ತಾ, ಮಂಜುನಾಥ, ಜೆ.ಗೋಪಾಲ್, ಎಸ್.ಎನ್.ಪಣಿಕುಮಾರ್, ಲಕ್ಕಪ್ಪಸ್ವಾಮಿ, ಎನ್,ಸಾಯಿಕುಮಾರ್, ಆರ್. ಈರಣ್ಣ, ಗಂಗರಾಜು, ಪಿ.ಈ. ಹನುಮಂತರಾಯ, ರೇವಣ್ಣ ಕೆ.ಎಂ. ಚಿನ್ನಾರೆಡ್ಡಿ ಬಿ.ಎಚ್. ಡಿ.ಮಂಜುನಾಥ್, ಮಾಜಿ ಕಾರ್ಯದರ್ಶಿ ಕೆ. ಆರ್. ಹನುಮಂತರಾಯ,ಕೃಷ್ಣನಾಯ್ಕ, ಮತ್ತಿತರಿದ್ದರು.
ವರದಿ: ಶಿವಾನಂದ ಪಾವಗಡ




