ಬೆಂಗಳೂರು : ಸಮಾಜ ಮುಖಿಯಾಗಿ ಕಾರ್ಯ ಚಟುವಟಿಕೆಗಳು ತೊಡಗಿಸಿಕೊಂಡ ವಾಯುವಿಹಾರಕ್ಕೆ ಬರುವ ಹಿರಿಯ ನಾಗರಿಕರು ಮತ್ತು ಜಿಕೆಡಬ್ಲ್ಯೂ ಲೇಔಟಿನ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಒಳಗೊಂಡಂತೆ ಸ್ಥಳೀಯ ಶ್ರೀ ಬಲಮುರಿ ಗಣಪತಿ ದೇವಸ್ಥಾನಕ್ಕೆ ಪೆಂಟ್ ಮಾಡಿಸಿ ಮತ್ತು ಗೊಡೆಗಳ ಮೇಲೆ ಸುಂದರವಾದ ದೇವಾನು ದೇವತೆಗಳ ಚಿತ್ರಗಳನ್ನು ಬಿಡಿಸಿ ಭಕ್ತರ ಮನಸ್ಸನ್ನು ಸೆಳೆಯುವ ಮಾಡಿದ್ದು ಖುಷಿ ಮತ್ತು ಸಂತೋಷ ತಂದಿದೆ ಎಂದು ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೆಚ್ ಎನ್ ಗಂಗಾಧರ್ ಅವರ ಧರ್ಮಪತ್ನಿ ಶ್ರೀಮತಿ ಗೀತಾ ಗಂಗಾಧರ್ ಹೇಳಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜಿಕೆಡಬ್ಲ್ಯೂ ಲೇಔಟಿನ ಬಲಮುರಿ ಗಣಪತಿ ದರ್ಶನ ಪಡೆದು ಮಾತನಾಡಿ ಅವರು ಮುಂಬರುವ ಮಾರ್ಚ್ ತಿಂಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಡೆಯುವ “ಹಿಂದೂ ಜನಾ ಸಮಾವೇಶಕ್ಕೆ” ನಮ್ಮ ಸೇವಾಕಾರ್ಯ ನಮ್ಮದಾಗಿದೆ ಎಂದು ಮಾಜಿ ಪಾಲಿಕೆ ಸದಸ್ಯ ಹೆಚ್ ಎನ್ ಗಂಗಾಧರ್ ಅವರ ಧರ್ಮ ಪತ್ನಿ ಶ್ರೀಮತಿ ಗೀತಾ ಗಂಗಾಧರ್ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಕೆ ಡಬ್ಲ್ಯೂ ಲೇಔಟಿನ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು, ಗಣಪತಿ ದೇವಸ್ಥಾನ ಕಮಿಟಿ ಅಧ್ಯಕ್ಷರು ಪದಾಧಿಕಾರಿಗಳು, ರಾಜಗೋಪಾಲನಗರ ವಾರ್ಡನ ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್




