ರಾಮದುರ್ಗ:- ಪಟ್ಟಣದ ತಾಲೂಕ ಪಂಚಾಯಿತ ಸಭಾ ಭವನದಲ್ಲಿ ಮಂಗಳವಾರ ಜರಗಿದ ಸಾಮಾನ್ಯ ಸಭೆ ಹಾಗೂ ಕೆಡಿಪಿ ಸಭೆಯ ಅಧ್ಯಕ್ಷತೆಯನ್ನು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ ಅವರು ವಹಿಸಿ ಮಾತನಾಡಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ನವೀನ್ ನಿಜಗುಲಿ ಇವರಿಗೆ ಶಾಸಕರಿಂದ ಖಡಕ ಎಚ್ಚರಿಕೆ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಕೇವಲ ಬಾಗಲಕೋಟೆಗೆ ಏಕೆ ಹೆಚ್ಚಿನ ಚಿಕಿತ್ಸೆಗೆ ಶಿಪಾರಸ್ಸು ಮಾಡುತ್ತೀರಿ, ಬೆಳಗಾವಿಗೆ ಹಾಗೂ ಹುಬ್ಬಳ್ಳಿ ಕೇವಲ ೧೦೦ ಕಿ.ಮೀ ಅಂತರ ಇವೆ. ಉಚಿತ ಅಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ಎಜೆನ್ಸಿಗೆ ಕಟ್ಟುನಿಟ್ಟಾಗಿ ರೋಗಿಯ ಪೋಷಕರ ಇಚ್ಚೆಯ ಸ್ಥಳಕ್ಕೆ ಕರೆದೊಯ್ಯಲು ತಿಳಿಸಿ, ಮತ್ತೊಮ್ಮೆ ದೂರು ಕೇಳಿ ಬಂದಲ್ಲಿ ಸರಕಾರದಿಂದ ಅಂಬ್ಯುಲೆನ್ಸ ವಾಹನ ಏಜೆನ್ಸಿಯನ್ನು ತೆಗೆದು ಹಾಕಲು ಪತ್ರ ಬರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ ಕಚೇರಿಯಲ್ಲಿಯ ಸಿಬ್ಬಂದಿಗಳ ವಿರುದ್ದ ಹೆಚ್ಚಾಗಿ ದೂರುಗಳು ಕೇಳಿ ಬಂದಿವೆ. ತಹಶೀಲ್ದಾರರು ಅಗತ್ಯ ಕ್ರಮವಹಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಸಾರ್ವಜನಿಕರಿಂದ ದೂರು ಬರದಂತೆ ಕ್ರಮ ವಹಿಸುವದಾಗಿ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಶ್ರೀನಿವಾಸ್ ವಿಶ್ವಕರ್ಮ ಸಭೆಗೆ ಪ್ರಗತಿ ಕುರಿತು ವರದಿ ಸಲ್ಲಿಸುವಂತೆ ಶಾಸಕ ಅಶೋಕ ಪಟ್ಟಣ ಅವರು, ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಿಗೆ ಬೇಸಿಗೆ ಕಾಲದಲ್ಲಿ ಬೋರ್ವೆಲ್ ವ್ಯವಸ್ಥೆ ಮಾಡಲಾಗಿದ್ದು ಗ್ರಾಮಗಳಲ್ಲಿ ನೀರನ ಕೊರತೆ ಇರದ ಹಾಗೆ ನೋಡಿಕೊಂಡಿರುತ್ತೇವೆ,
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರಿನ ತಪಾಸನೆ ಮಾಡುವ ಕಿಟ್ಟುಗಳನ್ನು ವಿತರಣೆ ಮಾಡಲಾಯಿತು
ಪುರಸಭೆ ಮುಖ್ಯಾಧಿಕಾರಿ ಗುಡದಾರಿ ಸಭೆಗೆ ಮಾಹಿತಿ ನೀಡುತ್ತಿದ್ದಂತೆ, ಶಾಸಕರು ಭಾಗ್ಯನಗರ, ಶ್ರೀಪತಿನಗರ, ಗಡದಕೇರಿ ಓಣಿಗಳ ಸರ್ವೇ ಮಾಡಲು ಈ ಹಿಂದೆಯೇ ಸೂಚಿಸಿದ್ದೇನೆ. ಆದರೂ ಕೆಲಸವಾಗಿಲ್ಲ. ರಾಮದುರ್ಗ ಪಟ್ಟಣದಲ್ಲಿ ಬೀದಿ ದೀಪಗಳಿಲ್ಲ. ಬಸವೇಶ್ವರ ವೃತ್ತ ಹಾಗೂ ಸಂಗೋಳ್ಳಿ ರಾಯಣ್ಣ ವೃತ್ತದ ನಂತರ ಸಂಪೂರ್ಣ ಲೈಟ್ ಅಳವಡಿಕೆ ಮಾಡಬೇಕು. ಏಕೆ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ,
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ನೀಡಲಾಗುತ್ಯಿರುವ ಕುರಿತು ಹಾಗೂ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಹೆದರಿಕೆ ಹಾಕುವ ದೂರು ಇದೆ. ಅಲ್ಲಿ ಇದ್ದಂತ ಸಿಬ್ಬಂದಿಗಳು ಮನೆಗೆ ಅಡುಗೆ ಒಯ್ಯುತ್ತಿರುವುದು ಗಮನಕ್ಕೆ ಬಂದಿದೆ ಇನ್ನು ಮುಂದೆ ಹೀಗಾದರೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಗುವುದು ಅಧಿಕಾರಿಗಳು ಅಂಥವರ ಬಗ್ಗೆ ಶಿಸ್ತು ಕ್ರಮ ತೆಗೆದುಕೊಂಡು ವ್ಯವಸ್ಥೆ ಸರಿಪಡಿಸಬೇಕು ಎಂದು ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ ಪತ್ತಾರ ಅವರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಹೆಸ್ಕಾಂ, ತಾ.ಪಂ, ನರೇಗಾ ಯೋಜನಾಧಿಕಾರಿ, ಕೃಷಿ ಇಲಾಖೆ, ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಆಡಳಿತಾಧಿಕಾರಿ ಕೆ.ನಾಗರಾಜ್, ದಂಡಾಧಿಕಾರಿಗಳಾದ ಪ್ರಕಾಶ ಹೊಳೆಪ್ಪಗೋಳ, ತಾಲೂಕ ಪಂಚಾಯಿತ ಇಒ ಪ್ರವೀಣಕುಮಾರ ಸಾಲಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ:- ಮಂಜುನಾಥ ಕಲಾದಗಿ