Ad imageAd image

ಪುರಸಭೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ನೇತೃತ್ವದಲ್ಲಿ ಸಾಮಾನ್ಯ ಸಭೆ

Bharath Vaibhav
ಪುರಸಭೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ನೇತೃತ್ವದಲ್ಲಿ ಸಾಮಾನ್ಯ ಸಭೆ
WhatsApp Group Join Now
Telegram Group Join Now

ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಪುರಸಭೆ ಮೊದಲನೇ ಮಹಡಿ ಸಭಾಭವನದಲ್ಲಿ ಇಂದು 2025-26 ನೆ ಸಾಲಿನ ಪುರಸಭೆಯ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇತೃತ್ವದಲ್ಲಿ ಪ್ರಥಮ ಸಾಮಾನ್ಯ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಮತ್ತು ನೂತನವಾಗಿ ಆಯ್ಕೆಯಾದ ನಾಮ ನಿರ್ದೇಶಿತ ಸದಸ್ಯರುಗಳಿಗೆ ಸ್ವಾಗತ ಕೋರಿ ಸನ್ಮಾನ ಮಾಡಿದರು.

ಈ ಸಾಮಾನ್ಯ ಸಭೆಯಲ್ಲಿ ನಡೆದ ವಿಷಯಗಳು :

1) ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸ್ವಾಗತ ಕೋರುವುದು. 2) ನೂತನವಾಗಿ ಆಯ್ಕೆಯಾದ ನಾಮ ನಿರ್ದೇಶತ ಸದಸ್ಯರುಗಳಿಗೆ ಸ್ವಾಗತ ಕೋರುವವರು. 3) ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಕುರಿತು ವಿಚಾರ.4) ಸನ್ 2025-26 ನೇ ಸಾಲಿನ ವಾರ್ಷಿಕ ಟೆಂಡರ್ ಕರೆಯುವ ವಿಚಾರ ಬಗ್ಗೆ. 5) ಈ ಆಸ್ತಿ ಗಣಕೀಕರಣ ಪ್ರಗತಿ ಕುರಿತು ವಿಚಾರ. 6) ಸಿಬ್ಬಂದಿ ಕಾರ್ಯವಿಧಾನದ ಬಗ್ಗೆ ಚರ್ಚೆ. 7) ಸಾರ್ವಜನಿಕರಿಂದ ಹಾಗೂ ಸಂಘ ಸಂಸ್ಥೆಗಳಿಂದ ಬಂದತಹ ಅರ್ಜಿಗಳ ಕುರಿತು ವಿಚಾರ. 8) ಪುರಸಭೆ ಮಾಲೀಕತ್ವದ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಕುರಿತು ವಿಚಾರ. 9) ರಾಮದುರ್ಗ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸುಭಾಷ್ ಚಂದ್ರ ಬೋಸ್ ಶಾಲೆಯಲ್ಲಿ ಖಾಲಿ ಇರುವ ಅಡುಗೆ ಸಿಬ್ಬಂದಿಗಳ ಆಯ್ಕೆ ಕುರಿತು ವಿಚಾರ.10) ರಾಮದುರ್ಗ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಡ್ಡರ ಓಣಿ ಹೆಸರು ಬದಲಾವಣೆ ಮಾಡಿ ಸಿದ್ಧರಾಮೇಶ್ವರ ನಗರ ಅಂತ ನಾಮಕರಣ ಮಾಡುವ ಕುರಿತು ವಿಚಾರ. 11) ಮಾನ್ಯ ಅಧ್ಯಕ್ಷರ ಅಪ್ಪನೇ ಮೇರೆಗೆ ಬರಬಹುದಾದ ವಿಷಯಗಳ ಬಗ್ಗೆ ಈ ಎಲ್ಲ ವಿಷಯಗಳ ಬಗ್ಗೆ 27 ವಾರ್ಡಗಳ ಸದಸ್ಯರ ಮುಂದೆ ಚರ್ಚೆ ನಡೆಸಲಾಯಿತು.

ಈ ಹನ್ನೊಂದು ಚರ್ಚಿಸು ತಕ್ಕಂತಹ ವಿಷಯಗಳ ನಡುವೆ ಕೆಲವು ಸದಸ್ಯರು ಹಾಗೂ ಸ್ಥಾಯಿ ಸಮಿತಿಯ ಸದಸ್ಯರು ಇ ಆಸ್ತಿ ಗಳ ಬಗ್ಗೆ ಮತ್ತು ಕೆಲವು ವಾರ್ಡಗಳಲ್ಲಿ ಕುಡಿಯುವ ನೀರಿನ ಬಗ್ಗೆ ಇನ್ನು ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು.

ಸಭೆಯ ಮುಗುದ ನಂತರ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲ ಸರ್ವ ಸದಸ್ಯರು ಕೂಡಿಕೊಂಡು ಹೊಸದಾಗಿ ಗಣ ತಾಜ್ಯ ವಿಲೇವಾರಿಗಾಗಿ ತಂದಂತ ಟ್ಯಾಕ್ಟರ್ ಡೋಜರ್ ಗೆ ಪೂಜೆ ಮಾಡಿ ಚಲನಗೆ ನೀಡಿದರು.

ವರದಿ : ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!