Ad imageAd image

ಜಿನಿ ಜಿನಿ ಮಳೆಹನಿಯಲ್ಲೂ ನೀರಿಗಾಗಿ ಪರದಾಟ, ಸಾರ್ವಜನಿಕರ ಹೋರಾಟ

Bharath Vaibhav
ಜಿನಿ ಜಿನಿ ಮಳೆಹನಿಯಲ್ಲೂ ನೀರಿಗಾಗಿ ಪರದಾಟ, ಸಾರ್ವಜನಿಕರ ಹೋರಾಟ
WhatsApp Group Join Now
Telegram Group Join Now

ಕಾಳಗಿ :  ರಟಕಲ್ ಗ್ರಾಮ ಪಂಚಾಯತಯಿಂದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳು ಸಹ ಒದಗಿಸಿ ಕೊಡೋಕ್ಕೆ ಆಗ್ತಿಲ್ಲಾ ಅಂದರೆ, ಪಂಚಾಯತ್ ರಾಜ್ ಇಲಾಖೆ ಇವತ್ತು ಯಾವ ಪರಿಸ್ಥಿತಿಯಲ್ಲಿದ್ದೆ ಎಂದು ಅರ್ಥ ಮಾಡ್ಕೋಬೇಕಾಗಿದೆ, ಜನರ ಸಾಮಾನ್ಯ ಸಮಸ್ಯೆ ನೀಡೋಕ್ಕೆ ಆಗದೆ ಇರೋ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಯಾವ ನಿಟ್ಟಿನಲ್ಲಿ ಆಡಳಿತ ಮಾಡುತ್ತಿದಾರೆ ಎಂದು ತಿಳಿದುಕೊಳ್ಳಬೇಕಾಗಿದೆ.

ಕಾಳಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಈ ಸಮಸ್ಯೆ ಎದ್ದು ಕಾಣಿಸುತ್ತೆ, ಅದೇ ರೀತಿ ಶ್ರಾವಣ ಮಾಸದ ರಟಕಲ್ ಗ್ರಾಮದಲ್ಲಿ ಸಾರ್ವಜನಿಕ ಕುಡಿಯುವ ನೀರು ಇಲ್ಲದೆ ಇವತ್ತಿಗೆ 10 ದಿನಕ್ಕೆ ಕಾಲಿಟ್ಟಿದೆ, ಜನರು ಕುಡಿಯುವ ನೀರಿನ ಎರಡು ಕರೆಂಟ್ ಮೋಟರು ಸುಟ್ಟು ಹೋಗಿವೆ, ಮತ್ತು ನಾಲ್ಕು ಕೊಳವೆಬಾವಿಯ ಸ್ಟಾರ್ಟರಗಳು ಸುಟ್ಟು ಹೋಗಿವೆ ದುರಸ್ತಿ ಆಗಿಲ್ಲ ಸಾರ್ವಜನಿಕರು ಕೂಡ ನೀರಿಗಾಗಿ ಪರದಾಡುವಂತಾಗಿದೆ.

ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಹಲವಾರು ಬಾರಿ ಹೇಳಿದರು ಕುರುಡರಂತೆ ವರ್ತಿಸುತ್ತಿರುವ ಬೇಜವಾಬ್ದಾರಿ ಗ್ರಾಮ ಪಂಚಾಯಿತಿ ಆಡಳಿತ ವಾಗಿದೆ, ದಿನನಿತ್ಯ ತಮ್ಮ ಹೊಟ್ಟೆಪಾಡಿಗಾಗಿ ಜೀವನ ನಡೆಸಲು ರಸ್ತೆಬದಿಯಲ್ಲಿರುವ ಹೋಟೆಲಗಳು, ನೀರಿಲ್ಲದೆ ಬಂದಾಗಿವೆ,ರಟಕಲ್ ಗ್ರಾಮದ ಅನೇಕ ಬಡಾವಣೆಯಲ್ಲಿ ನೀರಿನ ಅಭಾವದ ಕೊರತೆ ಹೆಚ್ಚಾಗಿದ್ದು, ಜನರ ಪಾಲಿಗೆ ಗ್ರಾಮ ಪಂಚಾಯಿತಿ ಇದ್ದು ಸತ್ತಂತಿದೆ, ಮಾನವೀಯತೆ ಇಲ್ಲದ ಜನ ವಿರೋಧಿ ಗ್ರಾಮ ಪಂಚಾಯಿತಿ ಆಗಿದೆ, ದುರಾಡಳಿತದಿಂದ ಕೂಡಿದ ಗ್ರಾಮ ಪಂಚಾಯಿತಿ ಸಾರ್ವಜನಿಕ ವಿಷಯದಲ್ಲಿ ಮಾನವೀಯತೆ ಇಲ್ಲದೆ ಕರುಣೆ ತೋರದೆ ಜನರ ಮನಸ್ಸಿಗೆ ಧಕ್ಕೆ ಆಗುವಂತ ರೀತಿಯಲ್ಲಿ ವರ್ತಿಸುವ ಜನ ವಿರೋಧಿಯಾಗಿ ಬಕಾಸುರನಂತೆ ಬಂದ ಹಣವೆಲ್ಲ ನುಂಗಿ ಹಾಕುವ ಕುತಂತ್ರದಿಂದ ಕೂಡಿದೆ, ಆಡಳಿತದ ವೈಫಲ್ಯವೇ ಇದಕ್ಕೆಲ್ಲ ಕಾರಣವಾಗಿದೆ ಮತ್ತು ಬೀದಿ ದೀಪಗಳು ಇಲ್ಲದೆ ಕತ್ತಲಲ್ಲಿ ಮುಳುಗಿದ ಊರಾಗಿದೆ, ಕೂಡಲೇ ದೀಪ ಅಳವಡಿಸಿ, ನೀರಿನ ಪೈಪುಗಳು ಆದಷ್ಟು ಬೇಗ ದುರಸ್ಥಿ ಮಾಡಬೇಕೆಂದು ಶರಣಬಸಪ್ಪ ಮಾಮಶೆಟ್ಟಿ ಜಿಲ್ಲಾಧ್ಯಕ್ಷರು ಕೆಪಿಆರ್ಎಸ್ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದರು.

ವರದಿ : ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!