ಹಾರೂಗೇರಿ: ಇದು ಸ್ಪರ್ಧಾತ್ಮಕ ಯುಗ, ಈ ಯುಗದಲ್ಲಿ ಯಶಸ್ಸು ಗಳಿಸಬೇಕಾದರೆ ಸ್ಪರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸುವುದು ಅನಿವಾರ್ಯ ಈ ಪರೀಕ್ಷೆಗಳಲ್ಲಿ ಗೆಲುವು ಪಡೆಯಬೇಕಾದರೆ ಹಲವಾರು ವಿಷಯಗಳ ಜ್ಙಾನ ಅವಶ್ಯಕ ಅದರಲ್ಲಿ ಭೂಗೋಳ ಶಾಸ್ತ್ರ ವಿಷಯವು ಬಹು ಪ್ರಾಮುಖ್ಯತೆಯನ್ನು ಪಡೆದಿರುವ ಕಾರಣ ಪ್ರತಿ ಸ್ಪರ್ಧಾರ್ಥಿ ಈ ವಿಷಯವನ್ನು ಆಳವಾಗಿ ಅಭ್ಯಾಸ ಮಾಡುವುದು ಅನಿವಾರ್ಯವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿಯ ಭೂಗೋಳ ಶಾಸ್ತ್ರ ವಿಷಯದ ಉಪನ್ಯಾಸಕರಾದ ರಾಘವೇಂದ್ರ ಗೌರಿಯವರು ತಿಳಿಸಿದರು.
ಅವರು ಸ್ಥಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾರೂಗೇರಿಯ IQAC ಮತ್ತು ಭೂಗೋಳ ಶಾಸ್ತ್ರ ವಿಭಾಗದ ವತಿಯಿಂದ “ಭೂಗೋಳ ಶಾಸ್ತ್ರ ಮತ್ತು ಸ್ಪರ್ಧಾತ್ಮಕ ಪರೀಕ್ಷೆ “ ಎಂಬ ವಿಷಯದ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭೂಗೋಳ ಶಾಸ್ತ್ರ ವಿಷಯವನ್ನು ಅಭ್ಯಸಿಸಲು ಸಂಗ್ರಹಿಸಬೇಕಾದ ಪುಸ್ತಕಗಳು,ಮತ್ತು ಇನ್ನುಳಿದ ಪರಿಕರಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ವಿಶೇಷವಾಗಿ ಭೂಗೋಳ ಶಾಸ್ತ್ರ ವಿಷಯವನ್ನು ಐಚ್ಚಿಕ ವಿಷಯವನ್ನಾಗಿ ಅಭ್ಯಾಸ ಮಾಡಿದರೆ ಲಭ್ಯವಾಗುವ ವಿಪುಲ ಅವಕಾಶಗಳ ಕುರಿತು ಸಮಗ್ರವಾಗಿ ಮಾಹಿತಿ ಹಂಚಿಕೊಂಡರು.
ಅಧ್ಯಕ್ಷತೆಯನ್ನು ವಹಿಸಿದ್ದ ಇತಿಹಾಸ ವಿಭಾಗದ ಮುಖ್ಯಸ್ಥರು ಮತ್ತು ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಡಾ.ಆರ್.ಬಿ.ಕೊಕಟನೂರ ಮಾತನಾಡುತ್ತಾ ಭೂಗೋಳ ಶಾಸ್ತ್ರ ವಿಷಯದ ಜ್ಞಾನ ಪಡೆಯುವುದರ ಮೂಲಕ ಉತ್ತಮ ಭವಿಷ್ಯವನ್ನು ವಿದ್ಯಾರ್ಥಿಗಳು ಕಟ್ಟಿಕೊಳ್ಳಬಹುದು .ಹಿಂದೆಂದಿಗಿಂತಲೂ ಇಂದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಮತ್ತು ಅನುಕೂಲತೆಗಳು ಇವೆ ಹಾಗಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ವಿಭಾಗದ ಮುಖ್ಯಸ್ಥರಾದ .ಜಿ.ಪಿ.ಅಳ್ಳಿಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಆಡು ಮುಟ್ಟದ ಸೊಪ್ಪಿಲ್ಲ ಭೂಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳಿರದ ಸಾಮಾನ್ಯ ಜ್ಞಾನದ ಸ್ಪರ್ಧಾತ್ಮಕ ಪರೀಕ್ಷೆಗಳಿಲ್ಲ “ಎಂದು ಹೇಳಿದರು.
ಕಾರ್ಯಕ್ರಮದಲ್ಲಿ IQAC ಸಂಯೋಜಕರಾದ ಡಿ.ವಾಯ್.ಕಾಂಬಳೆ, ಆನಂದ ಚಾಣಗಿ, ಯಲ್ಲಪ್ಪ ಮುಗಳಿಹಾಳ, ಡಾ.ರೇಖಾ, ಸಿ.ಜಿ.ಕೊಳ್ಳೆನ್ನವರ, ಪ್ರವೀಣ.ಅಂಗಡಿ, ಡಾ.ಆರ್.ಎ.ಬಡಿಗೇರ, ಹಣಮಂತಗೌಡ ಪಾಟೀಲ, ಮಂಜುನಾಥ ಪಾಟೀಲ, ಎಸ್.ಬಿ.ಜಮಾದಾರ, ಗಿರೀಶ ಚೌವ್ಹಾಣ ,ಪ್ರಮೋದ ಮುಂಜೆ, ರಾವಸಾಬ ಖಟಾವಿ, ಎನ್.ಬಿ.ಗಂಗಣ್ಣವರ ಲಕ್ಷ್ಮಿ ಭೇಂಡೆ ರಾಜಕುಮಾರ ಹುದ್ದಾರ ಅನಿಲ ಮುರಚಿಟ್ಟಿ ಸಂತೋಷ ಚೌಗುಲಾ ಮುಂತಾದವರು ಉಪಸ್ಥಿತರಿದ್ದರು.ಕುಮಾರಿ ಸಲ್ವಾ ಬಿಸ್ತಿ ಸ್ವಾಗತಿಸಿದರು. ಕುಮಾರ ದಯಾನಂದ ರಾನೋಗೊಳ ನಿರೂಪಿಸಿದರು. ಕುಮಾರಿ ರೂಪಾಲಿ ಕೋಳಿ ವಂದಿಸಿದರು.