Ad imageAd image

ಜಾರ್ಜ್ ಫಿಟ್ನೆಸ್ ಜಿಮ್ ಉದ್ಘಾಟನೆ: ಸಚಿವ ರಹೀಂಖಾನ್ ಹೇಳಿಕೆ

Bharath Vaibhav
ಜಾರ್ಜ್ ಫಿಟ್ನೆಸ್ ಜಿಮ್ ಉದ್ಘಾಟನೆ: ಸಚಿವ ರಹೀಂಖಾನ್ ಹೇಳಿಕೆ
WhatsApp Group Join Now
Telegram Group Join Now

ಸದೃಢ ಆರೋಗ್ಯಕ್ಕೆ ನಿತ್ಯ ವ್ಯಾಯಾಮ ಮಾಡಿ

ಬೀದರ್: ಸದೃಢ ಆರೋಗ್ಯಕ್ಕೆ ಎಲ್ಲರೂ ನಿತ್ಯ ವ್ಯಾಯಾಮ ಮಾಡಬೇಕು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಹೇಳಿದರು.
ನಗರದ ಕೆ.ಇ.ಬಿ. ಕಚೇರಿ ಸಮೀಪ ಈಚೆಗೆ ನಡೆದ ಜಾರ್ಜ್ ಫೆಟ್ನೆಸ್ ಜಿಮ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ, ಮಧುಮೇಹ ಮತ್ತಿತರ ರೋಗಗಳು ದೂರವಾಗುತ್ತವೆ ಎಂದು ತಿಳಿಸಿದರು.
ಮನುಷ್ಯನಲ್ಲಿ ಸಂಪತ್ತು ಎಷ್ಟಿದ್ದರೂ ಆರೋಗ್ಯ ಇಲ್ಲದಿದ್ದರೆ ಅದು ವ್ಯರ್ಥ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಜಿಮ್‍ಗಳಲ್ಲಿ ನಿತ್ಯ ಕನಿಷ್ಠ ತಾಸಾದರೂ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.


ಯುವ ಜನರಿಗೆ ಆರೋಗ್ಯದ ಗುಟ್ಟು ಹೇಳಿಕೊಡುತ್ತಿರುವ ವಿಕ್ಟೋರಿಯಾ ಜಾರ್ಜ್ ಅವರು 10 ವರ್ಷಗಳಿಂದ ಜಿಮ್ ನಡೆಸುತ್ತಿದ್ದಾರೆ. ಇದೀಗ ಹೈಟೆಕ್ ಜಿಮ್ ಆರಂಭಿಸಿದ್ದಾರೆ. ಯುವಜನರು ಇದರ ಲಾಭ ಪಡೆಯಬೇಕು ಎಂದು ಸಲಹೆ ಮಾಡಿದರು.
ಸಂಸದ ಸಾಗರ್ ಖಂಡ್ರೆ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಎಲ್ಲರಿಗೂ ಒತ್ತಡ ಹೆಚ್ಚಾಗಿದೆ. ಜಿಮ್‍ಗಳಲ್ಲಿ ವ್ಯಾಯಾಮ ಮಾಡುವ ಮೂಲಕ ಅದನ್ನು ನಿವಾರಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಾರ್ಜ್ ಅವರು ಜನರಿಗೆ ಆರೋಗ್ಯದ ಮಹತ್ವ ಮನವರಿಕೆ ಮಾಡಿಕೊಡುತ್ತಿದ್ದಾರೆ. ಫಿಟ್ನೆಸ್ ಜಿಮ್ ಮೂಲಕ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ನೆರವಾಗುತ್ತಿದ್ದಾರೆ. ಅವರ ಜನಪರ ಕಾಳಜಿ ಶ್ಲಾಘನೀಯ ಎಂದು ಹೇಳಿದರು.
ಜಾರ್ಜ್ ಫಿಟ್ನೆಸ್ ಜಿಮ್ ಮಾಲೀಕರಾದ ವಿಕ್ಟೋರಿಯಾ ಜಾರ್ಜ್ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣ ಕೊಡುಗೆ ನೀಡಲು ಜಿಮ್ ಫಿಟ್ನೆಸ್ ಸೆಂಟರ್ ಪ್ರಾರಂಭಿಸಿದ್ದೇನೆ ತಿಳಿಸಿದರು.
ಜಿಮ್‍ನಲ್ಲಿ ಪ್ರತಿ ದಿನ ಯೋಗ ಮಾಡುವುದರಿಂದ ಸ್ನಾಯುಗಳು ಬಲಗೊಳ್ಳುತ್ತದೆ. ಕೊಬ್ಬು ಕರಗಿ ತೂಕ ನಿಯಂತ್ರಣದಲ್ಲಿ ಇರುತ್ತದೆ. ರಕ್ತ ಸಂಚಾರದಲ್ಲಿ ಸುಧಾರಣೆಯಾಗಿ, ಹೃದಯ ರೋಗದ ಅಪಾಯ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ತಾಳ್ಮೆ ವೃದ್ಧಿಸುತ್ತದೆ. ದಿನವಿಡೀ ಮನಸ್ಸು ಉಲ್ಲಸಿತವಾಗಿರುತ್ತದೆ. ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತದೆ. ರಾತ್ರಿ ನೆಮ್ಮದಿಯ ನಿದ್ರೆ ಬರುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಹೇಳಿದರು.
ಸದ್ಯ ಶೇ 10 ರಷ್ಟು ಮಹಿಳೆಯರು ಮಾತ್ರ ಜಿಮ್ ಹಾಗೂ ಫಿಟ್ನೆಸ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಫಿಟ್ನೆಸ್ ಕೋಚ್ ಅನುಶಾ ಹೇಳಿದರು.
ಫಿಟ್ನೆಸ್ ಅಂದರೆ ಕೇವಲ ವಸ್ತುವಲ್ಲ. ಶಿಸ್ತು, ಸಮರ್ಪಣೆ ಮತ್ತು ಆರೋಗ್ಯಕರ ಜೀವನಶೈಲಿ ಎಂದು ಸೆಲೆಬ್ರಿಟಿ ಟ್ರೈನರ್ ರಾಖಿ ಅಭಿಪ್ರಾಯಪಟ್ಟರು.
ದೇವರು ನಮಗೆ ನೀಡಿದ ದೇಹವು ದೇವಾಲಯ ಇದ್ದಂತೆ. ಅದನ್ನು ಆರೋಗ್ಯಯುತವಾಗಿ, ಬಲವಾಗಿ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಪಾಸ್ಟರ್ ಎಜಿಕಿಯೇಲ್ ನುಡಿದರು.
ಬೀದರ್ ಮಹಾನಗರ ಪಾಲಿಕೆಯ ಅಧ್ಯಕ್ಷ ಮುಹಮ್ಮದ್ ಗೌಸ್, ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್, ಮುಖಂಡ ಫನಾರ್ಂಡೀಸ್ ಹಿಪ್ಪಳಗಾಂವ್, ಜಿಸಸ್ ಗ್ಲೋಬಲ್ ಚರ್ಚ್‍ನ ಫಾದರ್ ರೆವರೆಂಡ್ ರಜನಿಕಾಂತ್ ಮತ್ತಿತರರು ಇದ್ದರು.

ವರದಿ: ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!