Ad imageAd image

BV NEWS 5 ನಿಂದ ಸಾಮಾಜಿಕ ಜಾಲತಾಣದ ಕುರಿತು ಚರ್ಚಾಕೂಟ ಕಾರ್ಯಕ್ರಮ

Bharath Vaibhav
BV NEWS 5 ನಿಂದ ಸಾಮಾಜಿಕ ಜಾಲತಾಣದ ಕುರಿತು ಚರ್ಚಾಕೂಟ ಕಾರ್ಯಕ್ರಮ
WhatsApp Group Join Now
Telegram Group Join Now

ಬೆಳಗಾವಿ: ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಕಾರ್ಯಕ್ಕಾಗಿ ಬಳಸಿಕೊಂಡು ಉತ್ತಮ ಜ್ಞಾನ ಪಡೆಯಿರಿ ಎಂದು ಸಮಾಜಿಕ ಸೇವಕರು ಮಹಾಂತೇಶ ಗೋಕಾಕ ತಿಳಿಸಿದರು.

ನಗರದ ಸ್ವಾಧ್ಯಾಯ ವಿದ್ಯಾಮಂದಿರ ಪ್ರೌಢ ಶಾಲೆಯಲ್ಲಿ ಬಿವಿ ನ್ಯೂಸ್ 5 ಹಮ್ಮಿಕೊಂಡ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣ ಚರ್ಚಾ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಷಯಗಳನ್ನು ನಾವು ತಿಳಿದುಕೊಳ್ಳಬಹುದು. ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲಾ ವಿಷಯಗಳು ನಿಜವಾಗಿರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಷಯಗಳ ಸತ್ಯಾಸತ್ಯತೆಯನ್ನು ತಿಳಿಯಿರಿ ಎಂದ ಸಲಹೆ ನೀಡಿದರು.

ಭಾರತ ವೈಭವ ದಿನಪತ್ರಿಕೆಯ ಸಿಇಓ ವಿನಾಯಕ ಚೌಗಲಾ ಮಾತನಾಡಿ, ಸಾಮಾಜಿಕ ಜಾಲತಾಣ ಕೇವಲ ಮನರಂಜನೆಗೆ ಮಾತ್ರವಲ್ಲ. ಸಾಮಾಜಿಕ ಜಾಲತಾಣದಿಂದ ಅನೇಕ ಉದ್ಯಮಗಳು ನಡೆಯುತ್ತಿವೆ. ಸುದ್ದಿ ಮಾದ್ಯಮಗಳು ಮತ್ತು ಅನೇಕ ಜಾಹೀರಾತು ಸಂಸ್ಥೆ ಗಳು ಸಹ ಸಮಾಜಿಕ ಜಾಲತಾಣದಿಂದ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ಜಿ ಕೆ ಸರ್ವಿಸಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅರುಣಾ ಮಾತನಾಡಿ, ಸಾಮಾಜಿಕ ಜಾಲತಾಣ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ಸಾಮಾಜಿಕ ಜಾಲತಾಣಗಳು ಇಲ್ಲವಾದರೆ ನಮ್ಮ ಜೀವನ ಕಷ್ಟಕರ ಎಂಬಂತೆ ಅವುಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆವೆ. ಜ್ಞಾನ ಸಿಗುವುದು ಕೇವಲ ಸಾಮಾಜಿಕ ಜಾಲತಾಣಗಳಿಂದ ಮಾತ್ರವಲ್ಲ ಪುಸ್ತಕಗಳನ್ನ ಓದುವುದರಿಂದಲು ಸಿಗುತ್ತದೆ. ನಿಜವಾದ ಮತ್ತು ಸಂಪೂರ್ಣ ಜ್ಞಾನ ಸಿಗುವುದು ಪುಸ್ತಕಗಳಿಂದ. ಸಾಮಾಜಿಕ ಜಾಲತಾಣದ ಸದುಪಯೋಗ ಪಡೆಯಿರಿ. ಅದಕ್ಕ ಬಲಿಯಾಗದಿರಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ವಾಧ್ಯಾಯ ವಿದ್ಯಾಮಂದಿರ ಪ್ರೌಢ ಶಾಲೆಯ ಶಿಕ್ಷಕರಾದ ಅಶೋಕ ಬುಡವಿ, ಕಲಾವತಿ ಅಕ್ಕಿಶೆಟ್ಟಿ, ಶೋಭಾ ಜೋಶಿ, ಹೇಮಲತಾ ಕುಲಕರ್ಣಿ, ರಾಘವೇಂದ್ರ ಬಂಡಾರಿ ಮೊದಲಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!