ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಅವರಿಗೆ ವಯಸ್ಸಾಗಿದೆ. ಅವರ ಆಟ ಮೊದಲಿನಂತಿಲ್ಲ. ಅವರನ್ನು ಆಯ್ಕೆ ಮಾಡುವುದನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಕ್ರಿಕೆಟ್ ಗೆ ಅನ್ಯಾಯ ಬಗೆದಂತಾಗುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸಮನ್ ರಸೀತ್ ಲತೀಪ್ ಹೇಳಿದ್ದಾರೆ.
ಐಪಿಎಲ್ ಪಂದ್ಯಾವಳಿಯಲ್ಲಿ ಸದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ನೇ ಸ್ಥಾನದಲ್ಲಿದೆ. ತಂಡಕ್ಕೆ ಈ ಅಂಕಗಳು ಬೇಕಾಗಿವೆ. ಈ ಹಿನ್ನೆಲೆಯಲ್ಲಿ ಧೋನಿ ಅವರನ್ನು ಈಗಲೂ ಐಪಿಎಲ್ ಪಂದ್ಯಗಳಿಗೆ ಆಯ್ಕೆ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದಿದ್ದಾರೆ. ಧೋನಿ ವಿಕೆಟ್ ಹಿಂದೆ ಈಗಲೂ ಚುರುಕಾಗಿದ್ದಾರೆ. ಆದರೆ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಅಷ್ಟಕ್ಕೂ ಓರ್ವ ವಿಕೆಟ್ ಕೀಪರ್ 35 ದಾಟಿದರೆಂದರೆ ಉನ್ನತ ಮಟ್ಟದ ಕ್ರಿಕೆಟ್ ನಲ್ಲಿ ಆಡುವುದು ಕಠಿಣ ಎಂದು ಲತೀಪ್ ಹೇಳಿದ್ದಾರೆ.
ಈ ಹಿಂದಿನ ವಿಶ್ವಕಪ್ 2019 ರಲ್ಲಿಯೇ ಧೋನಿಗೆ ಅತ್ಯುತ್ತಮ ನಿರ್ವಹಣೆ ತೋರುವಲ್ಲಿ ಅಸಾಧ್ಯವಾಗುತ್ತಿತ್ತು. ಅದನ್ನು ಅರಿತು ಅವರೇ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸಮನ್ ಹೇಳಿದರು.