ಕ್ಯಾಂಟ್ ಬರ್ರಿ (ಇಂಗ್ಲೆಂಡ್) ಇಂಗ್ಲೆಂಡ್ ಲಯನ್ ವಿರುದ್ಧ ಇಲ್ಲಿ ನಡೆದ ಅನಧಿಕೃತ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎ, ತಂಡ 557 ರನ್ ಗಳ ವಿಶಾಲ ಮೊತ್ತ ದಾಖಲಿಸಿತು.
ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಲಯನ್ ತಂಡ ದಿನದಾಟ ಮುಗಿದಾಗ 2 ವಿಕೆಟ್ ಗೆ 237 ರನ್ ಗಳಿಸಿದ್ದು, ಇನ್ನು 320 ರನ್ ಗಳ ಹಿನ್ನೆಡೆ ಅನುಭವಿಸಿದೆ. ಟಾಮ್ ಹೈನ್ಸ್ 103 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದಾರೆ. ಮ್ಯಾಕ್ಸ್ ಹೋಲ್ಡನ್ 64 ರನ್ ಗಳಿಸಿ ಕ್ರೀಸ್ ಬಳಿ ಇದ್ದಾರೆ.
ಕರುಣ್ ದ್ವಿಶತಕ: ಇದಕ್ಕೆ ಮುನ್ನ ಎರಡನೇ ದಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ಎ, ತಂಡ 557 ರನ್ ಗಳಿಗೆ ತನ್ನ ಮೊದಲ ಸರದಿಯ ಮೊತ್ತವನ್ನು ಹಿಗ್ಗಿಸಿತು. ಕರುಣ ನಯ್ಯರ ದ್ವಿಶತಕ ಗಳಿಸಿದರು. ಆದರೆ ಮೊದಲ ದಿನ ಶತಕದತ್ತ ಹೆಜ್ಜೆ ಇಟ್ಟಿದ್ದ ಸರಫರಾಜ್ ಖಾನ್ ಇಂದು ಎರಡನೇ ದಿನ 92 ರಲ್ಲೇ ನಿರ್ಗಮಿಸಿದರು. ನಂತರ ಆಡಲು ಬಂದ ದ್ರುವ್ ಜುರೆಲ್ ಕೂಡ ಶತಕದ ಸನೀಹ ವಿಕೆಟ್ ಒಪ್ಪಿಸಿದರು. ಜುರೆಲ್ 94 ರನ್ ಗಳಿಸಿ ನಿರ್ಗಮಿಸಿದರು.




