ಸೇಡಂ: ತಾಲೂಕಿನ ಸೀಲಾರಕೊಟ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬಾಗದ ಜಾಗ ಸುಮಾರು ೧೨ಗುಂಟೆ ಇರುತ್ತದೆ ಅದನ್ನು ಶಾಲಾ ಮಕ್ಕಳಿಗೆ ಆಟದ ಮೈದನವಾಗಿ ಮಾಡಿಕೊಡಬೇಕು ಎಂದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ರಾಮಕೃಷ್ಣ ಮತ್ತು ನರೇಶ್, ಹಾಗೂ ಶ್ರೀನಿವಾಸ್ ಕಾವಲಿ ಅವರು ಪೋಷಕರ ಪರವಾಗಿ ಅಧಿಕಾರಿಗಳಿಗೆ ಮನವಿ ಮಾಡಿದರು.
ಇದೀಗ ಅನೇಕ ಬಾರಿ ತಾಲೂಕ ಪಂಚಾಯತ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ನೀಡಿಲ್ಲ. ಶಾಲೆಯ ಹಿಂಬಾಗದಲ್ಲಿ ಸರಕಾರಿ ಸ್ಥಳವಾಗಿದ್ದು ಅದು ಕಾಲಿಜಾಗ ಆಗಿರುವುದರಿಂದ ಅಲ್ಲಿ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡಿತಿದ್ದಲ್ಲದೆ, ಮೋರಿ ನೀರು ಸಹ ತುಂಬಿ ಶಾಲಾ ಮಕ್ಕಳಿಗೆ ದುರ್ವಾಸನೆ ಜೊತೆಗೆ, ಸೊಳ್ಳೆಗಳ ಕಾಟ ಹೆಚ್ಚಾಗಿದೆ, ಅದರಿಂದ ಅನೇಕ ಕಾಯಿಲೆಗಳು ಬಂದು ಮಕ್ಕಳಿಗೆ ತೊಂದರೆ ಆಗುವ ಸಾದ್ಯತೆ ಇದೆ.

ಕೆಲ ವರ್ಷಗಳ ಹಿಂದೆಯೇ ದೊಡ್ಡ ಸಂಕಟ ಎದುರಿಸಿದರು ಇಲ್ಲಿನ ಮಕ್ಕಳು. ಇಂತಹ ವಿಷಪೂರಿತ ವಾತಾವರಣ ಶಾಲೆಗೆ ನುಗ್ಗಿ ಮಕ್ಕಳಿಗೆ ವಾಂತಿಭೇದಿ ಆಗಿತ್ತು.
ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದುವಾರದೊಳೆಗೆ ಪರಿಹಾರ ಮಾಡದಿದ್ದರೆ ಗ್ರಾಮ ಪಂಚಾಯತ್ ಕಾರ್ಯಾಲಯ ಎದುರುಗಡೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




