ನಿಪ್ಪಾಣಿ: ನಿಪ್ಪಾಣಿ ತಾಲೂಕಿನ ರಾಂಪುರ್ ಕ್ರಾಸ್ ಬಳಿ ಬಡ ಜನತೆಗೆ ಸರಕಾರ ನೀಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖಾಸಗಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ಅಂಗಡಿಗೆ ಅನ್ನ ಹಾಗೂ ಆಹಾರ ಪೂರೈಕೆ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಮಂಗಳವಾರ ತಡ ರಾತ್ರಿ ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಅಜ್ಞಾನ ಪಟೇಲ್, ಸಿಂಧೆ ನಗರ ನಿಪ್ಪಾಣಿ, ಹಾಗೂ ಆಕಾಶ ಘಾಡಗೆ ಜೀಜಾ ಮಾತಾನಗರ ನಿಪ್ಪಾಣಿ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ತಿಳಿದ ಅಧಿಕ ಮಾಹಿತಿಯಂತೆ 50ಸಾವಿರ ರೂಪಾಯಿಗಳ ಬೆಲೆಯಿರುವ 1500 ಕೆಜಿ ಅಕ್ಕಿ ಹಾಗೂ ಎರಡು ವಾಹನಗಳು ಸೇರಿ 1ಲಕ್ಷ 50ಸಾವಿರ ರೂಪಾಯಿಗಳ ವಸ್ತುಜಪ್ತಿ ಮಾಡಲಾಗಿದೆ.
ಲಕನಾಪೂರ್ ಪರಿಸರದಲ್ಲಿಯ ಇಬ್ಬರು ಸಂಶಯಿಯ ಆರೋಪಿಗಳು ಪಡಿತರ ಚೀಟಿಯಲ್ಲಿ ಮಾರಾಟ ಮಾಡುವ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಕಡಿಮೆ ದರದಲ್ಲಿ ಖರೇದಿಸಿ ಹೆಚ್ಚಿನ ದರದಿಂದ ಮಾರಾಟ ಮಾಡಲು ಮಾರುಕಟ್ಟೆಗೆ ಕಾರ್ ಹಾಗೂ ಆಟೋರಿಕ್ಷಾದಲ್ಲಿ ಗೋಣಿ ಚೀಲಗಳಲ್ಲಿ ಅಕ್ಕಿ ತುಂಬಿಕೊಂಡು ಹೋಗುತ್ತಿದ್ದ ಮಾಹಿತಿ ಅನ್ನ ಹಾಗೂ ಆಹಾರ ಪೂರೈಕೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸದರಿ ವಾಹನಗಳ ಬೆನ್ನಟ್ಟಿ ವಾಹನ ತಡೆದು ಪರಿಶೀಲಿಸಿದಾಗ, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ತುಂಬಿದ ಗೋಣಿ ಚೀಲಗಳು ಕಂಡು ಬಂದವು.
ಅದರಂತೆ ಇಬ್ಬರೂ ಸಂಶಯಿತ ಆರೋಪಿಗಳ ಮೇಲೆ ತಾಲೂಕು ಅನ್ನ ಪೂರೈಕೆ ನಿರೀಕ್ಷಕರಾದ ಅಭಿಜಿತ್ ಗಾಯಕವಾಡ, ಅವರ ತಕರಾರು ದಾಖಲೆಯನ್ನು ಪರಿಗಣಿಸಿ ನಿಪ್ಪಾಣಿಯ ಬಸವೇಶ್ವರ ಚೌಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಮಹಾವೀರ ಚಿಂಚಣೆ




