ಬೆಂಗಳೂರು: ರಾಜ್ಯಸರ್ಕಾರದ ಆದೇಶದಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಚಾರದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಜಾತಿ ಸಮೀಕ್ಷೆ ಮಾಡಲು ಆಯೋಗ ರಚನೆ ಮಾಡಿದ್ದು ಅವರು ಎಲ್ಲಾ ಅಧಿಕಾರಿಗಳಿಗೂ ಕಟ್ಟುನಿಟ್ಚಾಗಿ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದರೂ ಈ ಆದೇಶವನ್ನು ಗಾಳಿಗೆ ತೂರಿ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಸಣ್ಣೇನಹಳ್ಳಿ ಗ್ರಾಮದ ನಾಲ್ಕು ಕುಟುಂಬಗಳ ಮನೆಗೆ ಭೇಟಿ ನೀಡದೆ. ಸಮೀಕ್ಷೆ ಮಾಡಿದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಅಲ್ಲಿಯ ಕುಟುಂಬಸ್ಥರ ದಲಿತ ಮುಖಂಡ ಕುಮಾರಯ್ಯ ಅವರಿಗೆ ದೂರವಾಣಿ ಕರೆ ಮೂಲಕ ಅವರಿಗಾದ ಅನ್ಯಾಯದ ಬಗ್ಗೆ ತಿಳಿಸಿದಾಗ ಅವರು ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಸಾದ್ ಪಿ.ಬಿ ಅವರಿಗೆ ಕುಮಾರಯ್ಯ ಪೊನ್
ಮಾತಾಡಿದಾಗ ಅವರು ಏಕಾಏಕಿ ಅಟ್ರಾಸಿಟಿ ಹಾ ಹಾಕ್ಯೋ ಹೋಗೋ ಅವನ್ನೆಲ್ಲ ಬೇಕಾದಷ್ಟು ನೋಡಿದ್ದೀನಿ ಎಂದು ಅವ್ಯಾಚ್ಯವಾಗಿ ಬೈದು ಫೋನ್ ಇಡು ಎಂದು ಫೋನ್ ಕಟ್ ಮಾಡ್ತಾರೆ. ಮತ್ತೆ ಕುಮಾರಯ್ಯ ಅವರು ಫೋನ್ ಮಾಡಿ ಪ್ರಸಾದ್ ಸಾರ್ ಎಂದು ಕೇಳಿದಾಗ ಇಲ್ಲ ಅವರಪ್ಪ ಎಂದು ದುರಹಂಕಾರಿ ಮಾಡಿದ್ದಾನೆ.
ಶಿಕ್ಷಕ ಪ್ರಸಾದ್ ಪಿಬಿ ವಿರುದ್ಧ ಶಿಕ್ಷಣ ಸಚಿವರಿಗೆ, ಹಾಸನ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ,
ಅರಸಿಕೆರೆ ತಾಲೂಕ್ ದಂಡಾಧಿಕಾರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಎಲ್ಲಾ ಅಧಿಕಾರಿಗಳು ಇದನ್ನು ಗಮನಹರಿಸಿ. ಈ ಶಿಕ್ಷಕನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಸೇವೆಯಿಂದ ವಜಗೊಳಿಸಬೇಕು ಎಂದು ಆಗ್ರಹಿಸಿ. ಈ ವಿಚಾರವಾಗಿ ಗೌರವಾನ್ವಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ದೂರು ನೀಡಿ ಹತ್ತು ದಿನ ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕರ್ನಾಟಕ ದಲಿತ ಮತ್ತು ಹಿಂದುಳಿದ ವಿಚಾರ ಸಮಿತಿ ರಾಜ್ಯಾಧ್ಯಕ್ಷ ಡಾ. ಸಿದ್ದಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಅಯ್ಯಣ್ಣ ಮಾಸ್ಟರ್




